May 7, 2026
Thursday, May 7, 2026
spot_img

ಭಾರತ-ವಿಯಟ್ನಾಂ ಬಾಂಧವ್ಯ ವೃದ್ಧಿ: 2030ರ ವೇಳೆಗೆ 25 ಶತ ಕೋಟಿ ಡಾಲರ್ ವಾಣಿಜ್ಯ ವಹಿವಾಟು ಗುರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ವಿಯಟ್ನಾಂ ನಡುವೆ 2030ರ ವೇಳೆಗೆ 25 ಶತ ಕೋಟಿ ಡಾಲರ್ ವಾಣಿಜ್ಯ ವಹಿವಾಟು ಗುರಿ ಮುಟ್ಟಲು ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಯಟ್ನಾಂ ಅಧ್ಯಕ್ಷರ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಗಳಲ್ಲಿ ಒಪ್ಪಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ದೆಹಲಿಯಲ್ಲಿಂದು ಸಚಿವಾಲಯದ ಪೂರ್ವ ವಲಯದ ಕಾರ್ಯದರ್ಶಿ ಕುಮಾರನ್, ಸಾಂಸ್ಕೃತಿಕ ಸಹಕಾರ, ಹಣಕಾಸು, ಆವಿಷ್ಕಾರ, ವಿರಳ ಖನಿಜಗಳು, ಔಷಧ, ಶಿಕ್ಷಣ ಕುರಿತ ಮಹತ್ವದ ಒಪ್ಪಂದಗಳಿಗೆ ಇಂದು ಸಹಿ ಹಾಕಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ವಿಯಟ್ನಾಂ ನ ಕೇಂದ್ರೀಯ ಬ್ಯಾಂಕ್ ನಡುವಿನ ಸಹಭಾಗಿತ್ವವು ಫಿನ್ ಟೆಕ್ ನಲ್ಲಿ ಪ್ರಮುಖವಾಗಲಿದೆ ಎಂದು ತಿಳಿಸಿದ್ದಾರೆ. ಈ ಒಪ್ಪಂದದಂತೆ ಗುಣಮಟ್ಟದ ಭಾರತೀಯ ಔಷಧಗಳು ವಿಯಟ್ನಾಂನಲ್ಲಿ ಕಡಿಮೆ ದರದಲ್ಲಿ ಲಭ್ಯವಾಗಲಿವೆ.

ಇದನ್ನೂ ಓದಿ:

ದ್ವಿಪಕ್ಷೀಯ ಬಾಂಧವ್ಯಕ್ಕೆ ಪ್ರಮುಖ ಆಧಾರ ಸ್ತಂಭವಾದ ರಕ್ಷಣಾ ಸಹಕಾರ ಮತ್ತು ರಕ್ಷಣಾ ಕೈಗಾರಿಕಾ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಮಾತುಕತೆಯಲ್ಲಿ ಸಮ್ಮತಿ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ವಿಯಟ್ನಾಂ ಅಧ್ಯಕ್ಷರು ಭಯೋತ್ಪಾದನೆ ನಿಗ್ರಹಕ್ಕೆ ಬೆಂಬಲ ತೋರಿದ್ದು, ಪಹಲ್ಗಾಮ್ ದಾಳಿಯ ವಿಷಯದಲ್ಲಿ ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ವಿಯಟ್ನಾಂ ಅಧ್ಯಕ್ಷರಿಗೆ ಧನ್ಯವಾದ ತಿಳಿಸಿದ್ದಾರೆ.

ವಿಯಟ್ನಾಂ, ಇಂಡೋ – ಫೆಸಿಫಿಕ್ ಸಾಗರ ಉಪಕ್ರಮ IPOI ಗೆ ಸೇರ್ಪಡೆಯಾಗಿದೆ ಎಂದರು. ವಿಯಟ್ನಾಂ ಅಧ್ಯಕ್ಷ ತೋ ಲಾಮ್ ಅವರು ನಾಳೆ ಮುಂಬೈಗೆ ಭೇಟಿ ನೀಡಲಿದ್ದು, ವಿಯಟ್ನಾಂ ಭಾರತ ವಾಣಿಜ್ಯ ಒಕ್ಕೂಟದಡಿ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !