October 10, 2026
Saturday, October 10, 2026
spot_img

Workout Mistakes | ಜಿಮ್‌ನಲ್ಲಿ ಬಹುತೇಕ ಜನ ಮಾಡುವ ಕಾಮನ್ ತಪ್ಪುಗಳಿವು

ಜಿಮ್ ಸೇರೋದು ಫಿಟ್ನೆಸ್ ಜರ್ನಿಯ ಒಳ್ಳೆಯ ಆರಂಭ. ಆದರೆ ಹಲವರು ಉತ್ಸಾಹದಲ್ಲಿ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳು ಫಲಿತಾಂಶ ತಡವಾಗೋಕೆ ಮಾತ್ರ ಅಲ್ಲ, ಕೆಲವೊಮ್ಮೆ ದೇಹಕ್ಕೆ ಗಾಯವಾಗೋ ಅಪಾಯವನ್ನೂ ಹೆಚ್ಚಿಸುತ್ತವೆ. ಜಿಮ್‌ನಲ್ಲಿ ಬೆವರು ಸುರಿಸುವುದಕ್ಕಿಂತ, ಸರಿಯಾದ ರೀತಿಯಲ್ಲಿ ವರ್ಕೌಟ್ ಮಾಡೋದು ಮುಖ್ಯ.

ಬಹಳ ಜನ ಮೊದಲ ದಿನವೇ ಹೆಚ್ಚು ತೂಕ ಎತ್ತೋಕೆ ಅಥವಾ ಹೆಚ್ಚು ಸೆಟ್‌ಗಳು ಮಾಡೋಕೆ ಪ್ರಯತ್ನಿಸುತ್ತಾರೆ. ಇದರಿಂದ ಮಸಲ್ ಪೇನ್ ಹೆಚ್ಚಾಗಿ, ದೇಹ ಬೇಗ ಸುಸ್ತಾಗಬಹುದು. ನಿಧಾನವಾಗಿ ಶುರು ಮಾಡೋದು ಉತ್ತಮ.

ನೇರವಾಗಿ ವರ್ಕೌಟ್ ಶುರು ಮಾಡೋದು ದೊಡ್ಡ ತಪ್ಪು. 5–10 ನಿಮಿಷ ವಾರ್ಮ್ ಅಪ್ ಮಾಡಿದ್ರೆ ದೇಹ ವ್ಯಾಯಾಮಕ್ಕೆ ಸಿದ್ಧವಾಗುತ್ತದೆ ಮತ್ತು ಇಂಜುರಿ ಅಪಾಯ ಕಡಿಮೆ ಆಗುತ್ತದೆ.

ಹೆಚ್ಚು ತೂಕ ಎತ್ತೋ ಹುಮ್ಮಸ್ಸಿನಲ್ಲಿ ಸರಿಯಾದ ಫಾರ್ಮ್ ಮರೆತುಬಿಡುತ್ತಾರೆ. ತಪ್ಪಾದ ಫಾರ್ಮ್ ಬೆನ್ನು, ಭುಜ ಮತ್ತು ಮೊಣಕಾಲಿಗೆ ಒತ್ತಡ ಕೊಡಬಹುದು.

ಪ್ರತಿದಿನ ಹೆವಿ ವರ್ಕೌಟ್ ಮಾಡಿದ್ರೆ ಮಾತ್ರ ಫಲ ಸಿಗುತ್ತೆ ಅನ್ನೋದು ತಪ್ಪು. ದೇಹಕ್ಕೂ ರಿಕವರಿ ಟೈಮ್ ಬೇಕು. ವಿಶ್ರಾಂತಿಯೂ ವರ್ಕೌಟ್‌ನ ಭಾಗವೇ.

ಜಿಮ್‌ನಲ್ಲಿ ಒಂದು ಗಂಟೆ ಕಷ್ಟಪಟ್ಟರೂ ಹೊರಗೆ ಜಂಕ್ ಫುಡ್ ತಿಂದ್ರೆ ಫಲಿತಾಂಶ ಕಾಣೋದು ಕಷ್ಟ. ವರ್ಕೌಟ್ ಜೊತೆಗೆ ಸರಿಯಾದ ಆಹಾರವೂ ಮುಖ್ಯ.

ಜಿಮ್‌ನಲ್ಲಿ ಹೆಚ್ಚು ಮಾಡುವುದೇ ಮುಖ್ಯ ಅಲ್ಲ… ಸರಿಯಾಗಿ ಮಾಡುವುದೇ ನಿಜವಾದ ಫಿಟ್ನೆಸ್ ಸೀಕ್ರೆಟ್.

Must Read