ಹೊಸದಿಗಂತ ವರದಿ ವಿಜಯಪುರ:
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯದ ಬಗ್ಗೆ ಕಾಂಗ್ರೆಸ್ ಪಕ್ಷದ ವರಿಷ್ಠ ಮಂಡಳಿ ತೀರ್ಮಾನ ಮಾಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಗರದಲ್ಲಿ ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಹೈ ಕಮಾಂಡ್ ಸುಪ್ರೀಂ ಆಗಿದ್ದು, ವರಿಷ್ಠ ಮಂಡಳಿಯಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರ್ಧಾರ ಮಾಡುತ್ತಾರೆ ಎಂದರು.
ವೇಣುಗೋಪಾಲ ಅವರು ಹೈ ಕಮಾಂಡ್ ನ ಒಂದು ಭಾಗ. ಎಲ್ಲ ನಿರ್ಣಯವನ್ನು ಪಕ್ಷದ ವರಿಷ್ಠರು ಕೈಗೊಳ್ಳುತ್ತಾರೆ ಎಂದರು.
ತಮಿಳುನಾಡು ಚುನಾವಣಾ ಫಲಿತಾಂಶ ವಿಚಾರಕ್ಕೆ, ಡಿಎಂಕೆ ಜೊತೆ ನಮ್ಮ ಮೈತ್ರೀ ಇದ್ದದ್ದು ಕೋಮುವಾದಿ ಶಕ್ತಿ ಬಿಜೆಪಿಯನ್ನು ದೂರ ಇಡಲು. ಈಗ ತಮಿಳುನಾಡಿನಲ್ಲಿ ವಿಜಯ ಅವರು ಜಾತ್ಯತೀತ ತತ್ವದ ಮೇಲೆ ಬಂದಿದ್ದಾರೆ. ಜನ ಒಂದು ಮನ್ನಣೆ, ತೀರ್ಪು ಕೊಟ್ಟಿದ್ದಾರೆ ಎಂದರು.
ಆ ತೀರ್ಪು ಹುಸಿಯಾಗಬಾರದು, ಜನರ ತೀರ್ಪಿಗೆ ನಾವು ತಲೆಬಾಗಬೇಕು. ವಿಶೇಷವಾಗಿ ಕೋಮುವಾದಿ ಶಕ್ತಿ ನಾವು ವಿರೋಧಿಸುವ ಕಾರಣ, ಇದೆಲ್ಲವನ್ನು ವಿಚಾರ ಮಾಡಿ. ಜನರ ತೀರ್ಪಿಗೆ , ಜಾತ್ಯತೀತ ನಿಲುವು ಹೊಂದಿದ ವಿಜಯ ಅವರ ಪಕ್ಷಕ್ಕೆ ನಾವು ಬೆಂಬಲ ಕೊಡುತ್ತಿದ್ದೇವೆ ಎಂದರು.
ನಾವು ಯಾರಿಗೂ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಲ್ಲ. ಒಬ್ಬ ಯುವಕನಿಗೆ ಜನ ಇಷ್ಟೊಂದು ಬೆಂಬಲ ನೀಡಿದ್ದಾರೆ. ನಾವು ಇಂತಹ ಸಂದರ್ಭದಲ್ಲಿ ಅವರಿಗೆ ಬೆಂಬಲ ನೀಡದಿದ್ದರೆ ಜನ ನಮ್ಮನ್ನು ತಪ್ಪಿತಸ್ಥರನ್ನಾಗಿ ಮಾಡುತ್ತಾರೆ. ಜಾತ್ಯತೀತ ಶಕ್ತಿ ದೂರ ಇಡಲು, ಹಾಗೂ ಜನರ ತೀರ್ಪಿಗೆ ಬೆಂಬಲಿಸಲು ನಾವು ವಿಜಯ ಅವರಿಗೆ ಬೆಂಬಲ ಕೊಡುತ್ತೇವೆ ಎಂದರು.
ಇದನ್ನೂ ಓದಿ:
ಸಿಎಂ ಸ್ಥಾನಕ್ಕೆ ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡಲು ನಕಾರ ವಿಚಾರ ಬಗ್ಗೆ ಪ್ರತಿಕ್ರಿಸಿ, ಅಲ್ಲಿ ಕಾನೂನಾತ್ಮಕ ಕ್ರಮ ಆಗುತ್ತದೆ. ವೆಸ್ಟ್ ಬೆಂಗಾಲನಲ್ಲಿ ಬಿಜೆಪಿಯಿಂದ ಸಾಕಷ್ಟು ಅನ್ಯಾಯ ಆಗಿದ್ದು ಸತ್ಯ ಎಂದರು.
ಮಮತಾ ಬ್ಯಾನರ್ಜಿಯವರ ವಿರುದ್ಧವಾಗಿ ಬಿಜೆಪಿಯರು ಎಸ್ ಐಅರ್ ಹಿಡಿದುಕೊಂಡು, ಅಧಿಕಾರಿಗಳನ್ನು ಹಿಡಿದುಕೊಂಡು, ಇಲೆಕ್ಷನ್ ಕಮಿಷನ್ ಹಿಡಿದುಕೊಂಡು ಅವರನ್ನು ಸೋಲಿಸಲು ನಿರಂತರ ಪ್ರಯತ್ನ ಮಾಡಿದರು. ವಾಮ ಮಾರ್ಗದ ಮೂಲಕ ಬಿಜೆಪಿಗರು ಜಯ ಗಳಿಸಿದರು ಅದರಲ್ಲಿ ಎರಡು ಮಾತಿಲ್ಲ ಎಂದರು.
ರಾಜೀನಾಮೆ ಕೊಡಬೇಕೋ ಬಿಡಬೇಕು ಅದು ಸಂವಿಧಾನದ ತಜ್ಞರು ಹೇಳಬೇಕಾಗುತ್ತದೆ ಎಂದರು. ಪಶ್ಚಿಮ ಬಂಗಾಳದ ಬಿಜೆಪಿ ಶಾಸಕನ ಪಿಎ ಕೊಲೆ ವಿಚಾರಕ್ಕೆ, ಆ ವಿಚಾರವಾಗಿ ಕಾನೂನು ಕ್ರಮ ಕೈಗೊಳ್ಳತ್ತೆ ಎಂದರು.



