August 29, 2026
Saturday, August 29, 2026
spot_img

ಕೈಗಾ ಅಣುಸ್ಥಾವರ ತಲುಪಬೇಕೆನ್ನುವಷ್ಟರಲ್ಲಿ ಪಲ್ಟಿಯಾಯ್ತು ಬೃಹತ್ ಟ್ರಾಲಿ: ಫುಲ್ ಜಾಮ್

ಹೊಸದಿಗಂತ ವರದಿ ಕಾರವಾರ:

ಕೈಗಾ ಅಣುಸ್ಥಾವರದ 5 ಮತ್ತು 6 ನೇ ಘಟಕದ ಕಾಮಗಾರಿಗೆ ಅಗತ್ಯವಿರುವ ಬೃಹತ್ ಯಂತ್ರೋಪಕರಣ ಹೊತ್ತು ನಾಲ್ಕು ತಿಂಗಳ ಹಿಂದೆ ಗುಜರಾತಿನಿಂದ ಹೊರಟ ಬೃಹತ್ ಟ್ರಾಲಿ ವಾಹನ ಇನ್ನೇನು ಕೈಗಾ ಅಣುಸ್ಥಾವರ ಪ್ರದೇಶ ತಲುಪಲಿದೆ ಎನ್ನುವಷ್ಟರಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದು ಮಲ್ಲಾಪುರ ಕೈಗಾ ನಡುವೆ ವಾಹನ ಸಂಚಾರ ಸ್ಥಗಿತಗೊಂಡಿದೆ.

ಕೈಗಾ ಯೋಜನಾ ಪ್ರದೇಶದಿಂದ ಕೇವಲ 5 ಕಿಲೋ ಮೀಟರ್ ಹಿಂದಿರುವ ಹರ್ಟಿಗಾ ಎನ್ನುವಲ್ಲಿ ಟ್ರಾಲಿ ವಾಹನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿ ಬಿದ್ದಿದೆ.

ಇದನ್ನೂ ಓದಿ:

ಗುಜರಾತಿನಿಂದ ಹೊರಟು ಸಾವಿರಾರು ಕಿಲೋ ಮೀಟರ್ ದೂರವನ್ನು ನಿಧಾನಗತಿಯಲ್ಲಿ ಕ್ರಮಿಸಿ ಜಾಗರೂಕತೆಯಿಂದ ಸಾಗಿ ಬಂದ ಭಾರೀ ಯಂತ್ರ ಇರುವ ವಾಹನ ಇನ್ನೇನು ಗುರಿ ತಲುಪಲಿದೆ ಎನ್ನುವಷ್ಟರಲ್ಲಿ ಅಪಘಾತಕ್ಕೀಡಾಗಿರುವುದು ದುರ್ದೈವ ಎಂದೇ ಹೇಳಬಹುದಾಗಿದೆ.

ಭಾರೀ ವಾಹನದಲ್ಲಿರುವ ಬೃಹತ್ ಯಂತ್ರೋಪಕರಣ ಮತ್ತು ವಾಹನ ಎತ್ತಿ ರಸ್ತೆ ಸುಗಮಗೊಳಿಸುವುದು
ಸವಾಲಿನ ಕೆಲಸವಾಗಲಿದ್ದು ತಾಂತ್ರಿಕ ಸಿಬ್ಬಂದಿಗಳು ಅತ್ಯಾಧುನಿಕ ಯಂತ್ರಗಳು ಕಾರ್ಯನಿರ್ವಹಿಸಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !