June 24, 2026
Wednesday, June 24, 2026
spot_img

Soup | ರಷ್ಯನ್ ಮಶ್ರೂಮ್ ಆಲೂಗಡ್ಡೆ ಸೂಪ್: ಮನೆಯಲ್ಲೇ ಮಾಡಿ ಸವಿಯಿರಿ

ರಾತ್ರಿ ಬಿಸಿ ಬಿಸಿ ಸೂಪ್ ಕುಡಿಯೋದು ಮನಸ್ಸಿಗೂ ದೇಹಕ್ಕೂ ಆರಾಮ ಕೊಡುತ್ತದೆ. ಅಂಥದ್ದರಲ್ಲಿ ರಷ್ಯನ್ ಮಶ್ರೂಮ್ ಮತ್ತು ಆಲೂಗಡ್ಡೆ ಸೂಪ್ ತುಂಬಾ ವಿಶೇಷ. ಅಣಬೆ, ಆಲೂಗಡ್ಡೆ, ಕ್ಯಾರೆಟ್ ಸೇರಿ ತಯಾರಾಗುವ ಈ ಸೂಪ್ ರುಚಿಗೆ ಮೃದುವಾಗಿದ್ದು, ಹೊಟ್ಟೆ ತುಂಬಿಸುವ ಆರೋಗ್ಯಕರ ಆಹಾರವೂ ಹೌದು.

ಬೇಕಾಗುವ ಪದಾರ್ಥಗಳು:

ಬೆಣ್ಣೆ ಅಥವಾ ಎಣ್ಣೆ – 4 ಟೇಬಲ್ ಚಮಚ
ಅಣಬೆ (ಮಶ್ರೂಮ್) – 450 ಗ್ರಾಂ
ಆಲೂಗಡ್ಡೆ – 4 (ಚೌಕವಾಗಿ ಹೆಚ್ಚಿದ್ದು)
ದೊಡ್ಡ ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ್ದು)
ಕ್ಯಾರೆಟ್ – 2 (ಚೂರು ಮಾಡಿದ್ದು)
ತರಕಾರಿ ಸಾರು – 6 ಕಪ್
ಮೈದಾ ಹಿಟ್ಟು – ¼ ಕಪ್
ಫ್ರೆಶ್ ಕ್ರೀಮ್ – 1 ಕಪ್
ಒಣ ಸಬ್ಬಸಿಗೆ ಅಥವಾ ಕೊತ್ತಂಬರಿ ಸೊಪ್ಪು – 2 ಚಮಚ
ಬೇ ಎಲೆ – 1
ಉಪ್ಪು – ರುಚಿಗೆ ತಕ್ಕಷ್ಟು
ಮೆಣಸಿನ ಪುಡಿ – ½ ಚಮಚ

ಮಾಡುವ ವಿಧಾನ:

ಮೊದಲು ಒಂದು ದೊಡ್ಡ ಪಾತ್ರೆಯಲ್ಲಿ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಅಣಬೆ ಹಾಕಿ ಚೆನ್ನಾಗಿ ಹುರಿಯಿರಿ. ಅಣಬೆ ಕಂದು ಬಣ್ಣಕ್ಕೆ ತಿರುಗಿದ ಬಳಿಕ ತೆಗೆದು ಇಡಿ.

ಅದೇ ಪಾತ್ರೆಗೆ ಈರುಳ್ಳಿ ಮತ್ತು ಕ್ಯಾರೆಟ್ ಹಾಕಿ ಸ್ವಲ್ಪ ಹೊತ್ತು ಬಾಡಿಸಿ. ನಂತರ ಆಲೂಗಡ್ಡೆ, ತರಕಾರಿ ಸಾರು, ಬೇ ಎಲೆ, ಉಪ್ಪು, ಮೆಣಸಿನ ಪುಡಿ ಮತ್ತು ಸಬ್ಬಸಿಗೆ ಸೇರಿಸಿ 15 ನಿಮಿಷ ಬೇಯಿಸಿ.

ಈಗ ಹುರಿದ ಅಣಬೆ ಸೇರಿಸಿ. ಬೇರೆ ಪಾತ್ರೆಯಲ್ಲಿ ಮೈದಾ ಹಿಟ್ಟು ಮತ್ತು ಕ್ರೀಮ್ ಮಿಶ್ರಣ ಮಾಡಿ, ಗಂಟಾಗದಂತೆ ಸೂಪ್ಗೆ ಸೇರಿಸಿ. 2-3 ನಿಮಿಷ ಕುದಿಸಿದರೆ ಸೂಪ್ ದಪ್ಪವಾಗಿ ಕೆನೆಭರಿತವಾಗುತ್ತದೆ.

ಕೊನೆಗೆ ಕೊತ್ತಂಬರಿ ಸೊಪ್ಪು ಉದುರಿಸಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ. ಬ್ರೆಡ್ ಜೊತೆ ಸವಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !