October 6, 2026
Tuesday, October 6, 2026
spot_img

ಫಿಟ್ & ಫುಡ್ 06 | ರುಚಿಕರ ಬ್ರೇಕ್‌ಫಾಸ್ಟ್‌ಗೆ ಸೂಪರ್ ಹೆಲ್ದಿ ಚಾಯ್ಸ್.. ‘ಮಲ್ಟಿಗ್ರೇನ್ ಚಿಲ್ಲಾ’ ರೆಸಿಪಿ

ಬೆಳಗಿನ ಉಪಹಾರಕ್ಕೆ ಟ್ರೈ ಮಾಡಿ ಸೂಪರ್ ಹೆಲ್ದಿ ‘ಮಲ್ಟಿಗ್ರೇನ್ ಚಿಲ್ಲಾ’ ರೆಸಿಪಿ.

ಏನೇನ್ ಬೇಕು

ಕಡಲೆ ಹಿಟ್ಟು, ಜೋಳದ ಹಿಟ್ಟು, ರಾಗಿ ಹಿಟ್ಟು, ಓಟ್ಸ್

ಈರುಳ್ಳಿ, ಕ್ಯಾರೆಟ್, ಕೊತ್ತಂಬರಿ ಸೊಪ್ಪು

ಹಸಿಮೆಣಸಿನಕಾಯಿ, ಶುಂಠಿ ಪೇಸ್ಟ್

ಜೀರಿಗೆ, ಅರಿಶಿನ, ಉಪ್ಪು

ನೀರು, ಎಣ್ಣೆ

ಮಾಡೋದು ಹೇಗೆ ನೋಡೋಣ ಬನ್ನಿ

ಮೊದಲು ಒಂದು ಪಾತ್ರೆಯಲ್ಲಿ ಎಲ್ಲ ರೀತಿಯ ಹಿಟ್ಟುಗಳನ್ನು ಹಾಕಿ ಚೆನ್ನಾಗಿ ಬೆರೆಸಿ. ನಂತರ ಹೆಚ್ಚಿದ ಈರುಳ್ಳಿ, ತುರಿದ ಕ್ಯಾರೆಟ್, ಹಸಿಮೆಣಸಿನಕಾಯಿ, ಜೀರಿಗೆ, ಅರಿಶಿನ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.

ಈಗ ಹೆಂಚನ್ನು ಕಾಯಿಸಿ, ಸ್ವಲ್ಪ ಎಣ್ಣೆ ಸವರಿ, ಹಿಟ್ಟನ್ನು ಹರಡಿ. ಮೇಲಿಂದ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗೂ ತರಕಾರಿಗಳನ್ನು ಉದುರಿಸಿ, ಎರಡೂ ಬದಿಗಳಲ್ಲಿ ಹೊಂಬಣ್ಣ ಬರುವವರೆಗೆ ಚನ್ನಾಗಿ ಬೇಯಿಸಿದರೆ ಬಿಸಿ ಬಿಸಿ ಮಲ್ಟಿಗ್ರೇನ್ ಚಿಲ್ಲಾ ಸವಿಯಲು ಸಿದ್ಧ, ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಪುದೀನಾ ಚಟ್ನಿ ಜೊತೆ ತಿಂದ್ರೆ ಟೇಸ್ಟ್ ಸೂಪರ್!

ಇದು ತಿನ್ನೋದ್ರಿಂದ ಏನ್ ಲಾಭ?

ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಹೊಟ್ಟೆ ಬೇಗ ತುಂಬುತ್ತದೆ ಮತ್ತು ಬೇಗ ಹಸಿವಾಗುವುದಿಲ್ಲ.

ರಾಗಿ ಮತ್ತು ಜೋಳದ ಬಳಕೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.

ಎಣ್ಣೆಯ ಬಳಕೆ ಕಡಿಮೆಯಿರುವುದರಿಂದ ಇದು ಜೀರ್ಣಿಸಿಕೊಳ್ಳಲು ಅತ್ಯಂತ ಹಗುರ.

ಇಂದೇ ನಿಮ್ಮ ಅಡುಗೆಮನೆಯಲ್ಲಿ ಈ ಪೌಷ್ಟಿಕ ತಿಂಡಿಯನ್ನು ತಯಾರಿಸಿ, ಸವಿದು ಆರೋಗ್ಯವಾಗಿರಿ.

Must Read