October 15, 2026
Thursday, October 15, 2026
spot_img

SNACKS | ಸಂಜೆಯ ಚಹಾಕ್ಕೆ ದಿಢೀರ್‌ ಸ್ನಾಕ್ಸ್ ಬೇಕೆ? ಹಾಗಾದ್ರೆ ಈರುಳ್ಳಿ ರಿಂಗ್ಸ್ ಒಮ್ಮೆ ಟ್ರೈ ಮಾಡಿ

ಈರುಳ್ಳಿ ರಿಂಗ್ಸ್‌ನ್ನು ಕೇವಲ 15-20 ನಿಮಿಷಗಳಲ್ಲಿ ತಯಾರಿಸಿ ಬಿಸಿಯಾಗಿ ತಿನ್ನಬಹುದು ಹಾಗೂ ಇದು ಸಂಜೆಯ ಚಹಾಕ್ಕೆ ಅತ್ಯುತ್ತಮ ಕುರುಕುಲು ತಿಂಡಿಯಾಗಿದೆ. ಇದನ್ನು ಬರಿ ಸ್ನಾಕ್ಸ್ ಆಗಿ ಮಾತ್ರವಲ್ಲದೆ, ಬರ್ಗರ್, ಸ್ಯಾಂಡ್‌ವಿಚ್ ಅಥವಾ ಬಿರಿಯಾನಿಯ ಜೊತೆಗೂ ಸೈಡ್ ಡಿಶ್ ಆಗಿ ಬಳಸಬಹುದು.

ಬೇಕಾಗುವ ಸಾಮಗ್ರಿಗಳು:
ಈರುಳ್ಳಿ
ಮೈದಾ ಹಿಟ್ಟು
ಜೋಳದ ಹಿಟ್ಟು
ಅಕ್ಕಿ ಹಿಟ್ಟು
ಕೆಂಪು ಮೆಣಸಿನ ಪುಡಿ
ಗರಂ ಮಸಾಲಾ
ಕಾಳುಮೆಣಸಿನ ಪುಡಿ
ಉಪ್ಪು
ಬ್ರೆಡ್ ಪುಡಿ
ಎಣ್ಣೆ

ತಯಾರಿಸುವ ವಿಧಾನ:

ಮೊದಲು ಈರುಳ್ಳಿಯನ್ನು ದಪ್ಪನೆಯ ಉಂಗುರದ ಆಕಾರದಲ್ಲಿ ಕತ್ತರಿಸಿ, ಒಂದೊಂದಾಗಿ ಬಿಡಿಸಿಕೊಳ್ಳಬೇಕು. ನಂತರ ಒಂದು ಬಟ್ಟಲಿನಲ್ಲಿ ಮೈದಾ, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ, ಕಾಳುಮೆಣಸಿನ ಪುಡಿಯನ್ನು ಹಾಕಿ. ಇದಕ್ಕೆ ಸ್ವಲ್ಪ ನೀರು ಮತ್ತು ಚಿಟಿಕೆ ಸೋಡಾ ಸೇರಿಸಿ ಗಟ್ಟಿಯಾದ ಮಿಶ್ರಣವನ್ನು ತಯಾರಿಸಿಕೊಳ್ಳಬೇಕು.

ಬಳಿಕ ಬಿಡಿಸಿಟ್ಟ ಈರುಳ್ಳಿ ರಿಂಗ್ಸ್‌ಗಳನ್ನು ಮೊದಲು ಒಣ ಮೈದಾ ಹಿಟ್ಟಿನಲ್ಲಿ ಹೊರಳಿಸಿ, ನಂತರ ತಯಾರಿಸಿದ ಹಸಿ ಮಿಶ್ರಣದಲ್ಲಿ ಅದ್ದಿ. ನಂತರ ಈ ರಿಂಗ್ಸ್‌ಗಳನ್ನು ಬ್ರೆಡ್ ಪುಡಿಯಲ್ಲಿ ಚೆನ್ನಾಗಿ ಹೊರಳಿಸಬೇಕು. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಲು ಇಟ್ಟು ಅದು ಕಾದ ನಂತರ, ಈರುಳ್ಳಿ ರಿಂಗ್ಸ್‌ಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿದರೆ ಗರಿಗರಿಯಾದ ರುಚಿಯಾದ ಈರುಳ್ಳಿ ರಿಂಗ್ಸ್ ಸಿದ್ದವಾಗುತ್ತದೆ.

Must Read