May 8, 2026
Friday, May 8, 2026
spot_img

CINE | ರಿಲೀಸ್‌ಗೂ ಮುನ್ನವೇ ‘ಅಯೋಗ್ಯ 2’ ಹವಾ: ಭರ್ಜರಿ ಬೆಲೆಗೆ ಸೇಲ್ ಆಯ್ತು ಆಡಿಯೋ ಹಕ್ಕು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ‘ಅಯೋಗ್ಯ 2’ ಸಿನಿಮಾ, ತೆರೆಗೆ ಬರುವುದಕ್ಕೂ ಮುನ್ನವೇ ದೊಡ್ಡ ಸುದ್ದಿ ಮಾಡಿದೆ.

ಚಿತ್ರೀಕರಣ ಹಂತದಲ್ಲಿರುವ ಈ ಚಿತ್ರದ ಆಡಿಯೋ ಹಕ್ಕುಗಳು ಕೋಟ್ಯಂತರ ಮೊತ್ತಕ್ಕೆ ಮಾರಾಟವಾಗಿದ್ದು, ಸಿನಿಮಾ ಮೇಲಿನ ಕ್ರೇಜ್ ಎಷ್ಟಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

2018ರಲ್ಲಿ ಬಿಡುಗಡೆಯಾದ ‘ಅಯೋಗ್ಯ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಯಶಸ್ಸು ಕಂಡಿತ್ತು. ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಜೋಡಿಯ ಕೆಮಿಸ್ಟ್ರಿ ಪ್ರೇಕ್ಷಕರ ಮನ ಗೆದ್ದಿತ್ತು. ವಿಶೇಷವಾಗಿ ಚಿತ್ರದ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿ ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿವೆ. ಇದೇ ಯಶಸ್ಸಿನ ಬೆನ್ನಲ್ಲೇ ಎರಡನೇ ಭಾಗದ ಮೇಲೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ:

ಇದೀಗ ‘ಅಯೋಗ್ಯ 2’ ಚಿತ್ರದ ಸಂಗೀತ ಹಕ್ಕುಗಳನ್ನು ಆನಂದ್ ಆಡಿಯೋ 2 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿಸಲಾಗಿದೆ ಎಂಬ ಮಾಹಿತಿ ಸಿನಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮೊದಲ ಭಾಗಕ್ಕೆ ಮೆರುಗು ನೀಡಿದ್ದ ತಂಡವೇ ಮತ್ತೊಮ್ಮೆ ಒಂದಾಗಿರುವುದು ವಿಶೇಷ.

ನಿರ್ದೇಶಕ ಮಹೇಶ್ ಕುಮಾರ್ ಮತ್ತೊಮ್ಮೆ ಆ್ಯಕ್ಷನ್-ಎಂಟರ್‌ಟೈನರ್ ಶೈಲಿಯಲ್ಲಿ ಕಥೆ ಕಟ್ಟುತ್ತಿದ್ದು, ಅರ್ಜುನ್ ಜನ್ಯ ಸಂಗೀತದ ಮೇಲೂ ದೊಡ್ಡ ನಿರೀಕ್ಷೆ ಇದೆ. ಮಳೆಗಾಲದಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆ ಇದ್ದು, ರಿಲೀಸ್‌ಗೂ ಮುನ್ನವೇ ಸಿನಿಮಾ ಭರ್ಜರಿ ಸದ್ದು ಮಾಡತೊಡಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !