October 10, 2026
Saturday, October 10, 2026
spot_img

Summer Drink | ಬೇಸಿಗೆಯಲ್ಲಿ ದೇಹಕ್ಕೆ ತಂಪು ಕೊಡುವ ಮಖಾನ ಮಿಲ್ಕ್ ಶೇಕ್

ಬೇಸಿಗೆಯ ಬಿಸಿಲಿನಲ್ಲಿ ದೇಹಕ್ಕೆ ತಂಪು, ಹೊಟ್ಟೆಗೆ ಹಿತ ಮತ್ತು ಶಕ್ತಿ ನೀಡುವ ಪಾನೀಯ ಈ ಮಖಾನ ಮಿಲ್ಕ್ ಶೇಕ್. ಮಖಾನದಲ್ಲಿ ಪ್ರೋಟೀನ್, ಫೈಬರ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಈ ಡ್ರಿಂಕ್‌ ರುಚಿಯ ಜೊತೆಗೆ ಪೌಷ್ಟಿಕಾಂಶವನ್ನೂ ಹೆಚ್ಚಿಸುತ್ತವೆ.

ಬೇಕಾಗುವ ಪದಾರ್ಥಗಳು:

ಮಖಾನ – 1 ಕಪ್
ತಣ್ಣನೆಯ ಹಾಲು – 2 ಕಪ್
ಖರ್ಜೂರ – 3 ರಿಂದ 4 (ಬೀಜ ತೆಗೆದದ್ದು)
ಜೇನುತುಪ್ಪ – 1 ಚಮಚ (ಬೇಕಿದ್ದರೆ)
ಏಲಕ್ಕಿ ಪುಡಿ – ಚಿಟಿಕೆ
ಬಾದಾಮಿ ಅಥವಾ ಗೋಡಂಬಿ – 5 ರಿಂದ 6
ಐಸ್ ಕ್ಯೂಬ್ಸ್ – 3 ರಿಂದ 4
ಕೇಸರಿ ದಳ – ಸ್ವಲ್ಪ

ಮಾಡುವ ವಿಧಾನ:

ಮೊದಲು ಕಡಿಮೆ ಉರಿಯಲ್ಲಿ ಮಖಾನವನ್ನು 2-3 ನಿಮಿಷ ಹುರಿದು ಗರಿಗರಿಯಾಗಿಸಿ. ತಣ್ಣಗಾದ ಬಳಿಕ ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ.

ನಂತರ ಮಿಕ್ಸಿ ಜಾರ್‌ಗೆ ಮಖಾನ ಪುಡಿ, ತಣ್ಣನೆಯ ಹಾಲು, ಖರ್ಜೂರ, ಏಲಕ್ಕಿ ಪುಡಿ, ಬಾದಾಮಿ ಮತ್ತು ಐಸ್ ಕ್ಯೂಬ್ಸ್ ಹಾಕಿ ನುಣ್ಣಗೆ ಬ್ಲೆಂಡ್ ಮಾಡಿ. ಸಿಹಿ ಕಡಿಮೆ ಅನ್ನಿಸಿದರೆ ಸ್ವಲ್ಪ ಜೇನುತುಪ್ಪ ಸೇರಿಸಬಹುದು.

ಈಗ ಗ್ಲಾಸ್‌ಗೆ ಸುರಿದು ಮೇಲೆ ಕೇಸರಿ ದಳ ಅಥವಾ ಕತ್ತರಿಸಿದ ಡ್ರೈಫ್ರೂಟ್ಸ್ ಉದುರಿಸಿ ತಣ್ಣಗೆ ಸರ್ವ್ ಮಾಡಿ.

Must Read