ಮದುವೆ ಎಂಬುದು ಪ್ರತಿಯೊಬ್ಬನ ಜೀವನದ ಪ್ರಮುಖ ಘಟ್ಟ. ಜೀವನದ ಉದ್ದಕ್ಕೂ ಜೊತೆಯಾಗಿ ಸಾಗುವ ಸಂಗಾತಿಯನ್ನು ಆಯ್ಕೆ ಮಾಡುವಾಗ ಕೇವಲ ಬಾಹ್ಯ ಸೌಂದರ್ಯವನ್ನಷ್ಟೇ ನೋಡುವುದು ದೊಡ್ಡ ತಪ್ಪು. ಕೆಲವು ನಿರ್ದಿಷ್ಟ ಗುಣಗಳನ್ನು ಹೊಂದಿರುವ ಮಹಿಳೆಯರನ್ನು ಮದುವೆಯಾಗುವುದರಿಂದ ಪುರುಷನ ಜೀವನದಲ್ಲಿ ಶಾಂತಿ ಮತ್ತು ಪ್ರಗತಿ ಎರಡೂ ನಾಶವಾಗಬಹುದು.
ಹಾಗಾದರೆ, ಪುರುಷರು ಎಂತಹ ಮಹಿಳೆಯರನ್ನು ಮದುವೆಯಾಗಬಾರದು?
ಯಾವ ಮಹಿಳೆ ಪದೇ ಪದೇ ಸುಳ್ಳು ಹೇಳುತ್ತಾಳೋ ಅಥವಾ ಸಣ್ಣ ವಿಷಯಗಳಿಗೂ ವಂಚಿಸುತ್ತಾಳೋ ಅಂತಹವರನ್ನು ಮದುವೆಯಾಗಬಾರದು. ಸುಳ್ಳಿನ ಮೇಲೆ ಕಟ್ಟಿದ ಸಂಸಾರ ಹೆಚ್ಚು ಕಾಲ ಉಳಿಯುವುದಿಲ್ಲ. ಇದು ಪತಿಯ ಗೌರವಕ್ಕೆ ದಕ್ಕೆ ತರುವುದಲ್ಲದೆ, ಕುಟುಂಬದಲ್ಲಿ ಬಿರುಕು ಮೂಡಿಸುತ್ತದೆ.
ತನ್ನ ಸೌಂದರ್ಯ ಅಥವಾ ಶ್ರೀಮಂತಿಕೆಯ ಬಗ್ಗೆ ಅತಿಯಾದ ಹೆಮ್ಮೆ ಪಡುವ ಮತ್ತು ಇತರರನ್ನು ಕೀಳಾಗಿ ಕಾಣುವ ಮಹಿಳೆಯರು ಸಂಸಾರಕ್ಕೆ ಸರಿಹೊಂದುವುದಿಲ್ಲ. ಇಂತಹವರು ಗಂಡನ ಮನೆಯವರನ್ನು ಗೌರವಿಸುವುದಿಲ್ಲ, ಇದರಿಂದ ಮನೆಯಲ್ಲಿ ಸದಾ ಕಳಹಗಳು ನಡೆಯುತ್ತಿರುತ್ತವೆ.
ಮಾತಿನಲ್ಲಿ ಮೃದುತ್ವ ಇಲ್ಲದ, ಸದಾ ಚುಚ್ಚು ಮಾತುಗಳಿಂದ ಇತರರನ್ನು ನೋಯಿಸುವ ಮಹಿಳೆಯರು ಮನೆಯ ನೆಮ್ಮದಿಯನ್ನು ಹಾಳುಮಾಡುತ್ತಾರೆ. ಚಾಣಕ್ಯರ ಪ್ರಕಾರ, ಸಿಹಿಯಾಗಿ ಮಾತನಾಡುವ ಹೆಂಡತಿ ಮನೆಗೆ ಮಹಾಲಕ್ಷ್ಮಿಯಿದ್ದಂತೆ, ಆದರೆ ಕಠೋರ ಮಾತುಗಳನ್ನಾಡುವವಳು ಮನೆಯನ್ನು ನರಕವಾಗಿಸುತ್ತಾಳೆ.
ಮದುವೆಯಾಗುವ ಮುನ್ನ ಹುಡುಗಿಯ ಕುಟುಂಬದ ಹಿನ್ನೆಲೆ ಮತ್ತು ಆಕೆಯ ಸಂಸ್ಕಾರವನ್ನು ಗಮನಿಸುವುದು ಬಹಳ ಮುಖ್ಯ. ಮನೆಯ ಹಿರಿಯರನ್ನು ಗೌರವಿಸದ ಅಥವಾ ಸಂಪ್ರದಾಯಗಳಿಗೆ ಬೆಲೆ ನೀಡದ ಮಹಿಳೆ ಇಡೀ ವಂಶದ ಹೆಸರನ್ನು ಹಾಳುಮಾಡುವ ಸಾಧ್ಯತೆ ಇರುತ್ತದೆ.
ನಿಷ್ಠೆ ಎಂಬುದು ದಾಂಪತ್ಯದ ಅಡಿಪಾಯ. ಮದುವೆಯ ನಂತರವೂ ಪರಪುರುಷರ ಕಡೆಗೆ ಆಕರ್ಷಿತರಾಗುವ ಅಥವಾ ಸಂಬಂಧದಲ್ಲಿ ಪ್ರಾಮಾಣಿಕತೆ ಇಲ್ಲದ ಮಹಿಳೆಯರು ಪುರುಷನ ಜೀವನವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಬಹುದು.
ಆರ್ಥಿಕ ಶಿಸ್ತು ಇಲ್ಲದ, ಅನಗತ್ಯವಾಗಿ ಹಣ ಪೋಲು ಮಾಡುವ ಮಹಿಳೆಯರು ಗಂಡನನ್ನು ಸಾಲದ ಸುಳಿಗೆ ತಳ್ಳಬಹುದು. ಸಂಸಾರವನ್ನು ಮಿತವ್ಯಯದಿಂದ ನಡೆಸುವ ಗುಣ ಹೆಣ್ಣಿಗೆ ಬಹಳ ಮುಖ್ಯ.
ಸೌಂದರ್ಯವು ತಾತ್ಕಾಲಿಕ, ಆದರೆ ಗುಣವು ಶಾಶ್ವತ. ಆದ್ದರಿಂದ ಪುರುಷರು ಬಾಳ ಸಂಗಾತಿಯನ್ನು ಆಯ್ಕೆ ಮಾಡುವಾಗ ಬಾಹ್ಯ ರೂಪಕ್ಕಿಂತ ಆಕೆಯ ಮನಸ್ಸು ಮತ್ತು ಗುಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಆಗ ಮಾತ್ರ ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ ನೆಲೆಸಲು ಸಾಧ್ಯ.



