August 27, 2026
Thursday, August 27, 2026
spot_img

ಕಾರಿಗೆ ಡಿಕ್ಕಿ ಹೊಡೆದ ಸ್ಪೋರ್ಟ್ಸ್‌ ಬೈಕ್‌: ಮಕ್ಕಳು ಸೇರಿದಂತೆ ಐವರ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವೇಗವಾಗಿ ಬಂದ ಸ್ಪೋರ್ಟ್ಸ್‌ ಬೈಕ್‌ವೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಇಬ್ಬರು ಮಕ್ಕಳು ಸೇರಿ ಐವರು ಮೃತಪಟ್ಟಿರುವ ಘಟನೆ ತೆಲಂಗಾಣದ ಮೆಹಬೂಬ್‌ನಗರದಲ್ಲಿ ನಡೆದಿದೆ.

ಬೈಪಾಸ್‌ ರಸ್ತೆಯ ಪಾಲಕೊಂಡ ಜಂಕ್ಷನ್‌ನಲ್ಲಿ ಈ ಅಪಘಾತ ಸಂಭವಿಸಿದ್ದು, ಮೃತರೆಲ್ಲರೂ ಒಂದೇ ಕುಟುಂಬದವರು ಎಂದು ತಿಳಿದುಬಂದಿದೆ. ಬರ್ಥ್‌ಡೇ ಪಾರ್ಟಿಗೆ ತೆರಳಿ ಮನೆಗೆ ವಾಪಾಸಾಗುತ್ತಿದ್ದ ವೇಳೆ ಯುಟರ್ನ್‌ನಲ್ಲಿ ಅತಿ ವೇಗದಲ್ಲಿ ಬಂದ ಸ್ಪೋರ್ಟ್ಸ್‌ ಬೈಕ್‌ ಕಾರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಕಾರಿನ ಹಿಂಬದಿ ಸೀಟ್‌ನಲ್ಲಿದ್ದ ಸಾರಾ, ಪುತ್ರ ಹುಜೈಫಾ, ಒಂದುವರೆ ವರ್ಷದ ಕಂದಮ್ಮ ಅಮ್ಮರ್‌ ಸ್ಥಳದಲ್ಲೇ ನಿಧನರಾಗಿದ್ದಾರೆ. ಬೈಕ್‌ ಸವಾರ ಅವೆಜ್‌ ಕೂಡ ನಿಧನರಾಗಿದ್ದಾರೆ. ಹೈದರಾಬಾದ್‌ನಿಂದ ಬಂದಿದ್ದ ಯುವಕರು ಗುಂಪೊಂದು ಸ್ಪೋರ್ಟ್ಸ್‌ ಬೈಕ್‌ನಲ್ಲಿ ರೇಸ್‌ ನಡೆಸಿದೆ. ಈ ವೇಳೆ ಅಪಘಾತ ಸಂಭವಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !