May 13, 2026
Wednesday, May 13, 2026
spot_img

ಮುಲಾಯಂ ಸಿಂಗ್ ಪುತ್ರ ಪ್ರತೀಕ್ ಯಾದವ್ ಸಾವಿಗೆ ವಿಷಪ್ರಾಶನ ಕಾರಣವೇ? ವೈದ್ಯರು ಹೇಳಿದ್ದೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ಮುಲಾಯಂ ಸಿಂಗ್​ ಯಾದವ್​ ಪುತ್ರ ಪ್ರತೀಕ್​ ಯಾದವ್​ ಇಂದು ಸಾವನ್ನಪ್ಪಿದ್ದಾರೆ.

ಇತ್ತ 38 ವರ್ಷದ ಪ್ರತೀಕ್​ ಯಾದವ್ ಸಾವಿನ ಹಿಂದೆ ವದಂತಿಗಳು ಹರಿದಾಡುತ್ತಿದ್ದು, ವಿಷಪ್ರಾಶನ ಮಾಡಿದ್ದಾರೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿದೆ. ಈ ಬೆನ್ನಲ್ಲೇ ಆಸ್ಪತ್ರೆ ವೈದ್ಯರು ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿದ ಲಖನೌ ಸಿವಿಲ್​ ಆಸ್ಪತ್ರೆ ವೈದ್ಯರಾದ ಡಾ. ಜಿ.ಸಿ. ಗುಪ್ತಾ ಅವರು, ಪ್ರತೀಕ್​ ಯಾದವ್​ ಅವರ ದೇಹದಲ್ಲಿ ಯಾವುದೇ ರೀತಿಯ ವಿಷ ದೊರೆತಿಲ್ಲ. ಹೀಗಾಗಿ ಸಾವಿನ ಹಿಂದೆ ವಿಷಪ್ರಾಶನ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ. ಪ್ರಾಥಮಿಕ ತನಿಖೆಯಲ್ಲಿ ವಿಷಪ್ರಾಶನದಿಂದ ಸಾವು ಸಂಭವಿಸಿದೆ ಎನ್ನುವುದು ಸುಳ್ಳಾಗಿದ್ದು, ಯಾರು ಈ ಕುರಿತು ವದಂತಿಗಳನ್ನು ಹಬ್ಬಿಸಬೇಡಿ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !