August 18, 2026
Tuesday, August 18, 2026
spot_img

FOOD | ಘಮಘಮಿಸುವ ಮೆಂತ್ಯೆ ಕಾಳಿನ ಅನ್ನ: ಕಹಿಯಿಲ್ಲದೆ ರುಚಿಯಾಗಿ ಮಾಡುವುದು ಹೇಗೆ ಗೊತ್ತಾ?

ಕರ್ನಾಟಕದ ಸಾಂಪ್ರದಾಯಿಕ ಅಡುಗೆಗಳಲ್ಲಿ ಮೆಂತ್ಯೆ ಅನ್ನ ಅತ್ಯಂತ ವಿಶಿಷ್ಟವಾದ ಹಾಗೂ ಆರೋಗ್ಯಕರವಾದ ಒಂದು ತಿನಿಸಾಗಿದೆ. ಮೆಂತ್ಯ ಕಾಳುಗಳು, ಜೀರಿಗೆ ಮತ್ತು ಕಾಳುಮೆಣಸಿನ ನೈಸರ್ಗಿಕ ಸುವಾಸನೆಯನ್ನು ಒಳಗೊಂಡಿರುವ ಈ ಅನ್ನವು ಕೇವಲ ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲದೆ, ದೇಹಕ್ಕೆ ಅಮೂಲ್ಯವಾದ ಔಷಧೀಯ ಗುಣಗಳನ್ನು ಒದಗಿಸುತ್ತದೆ.

ಬೇಕಾಗುವ ಸಾಮಾಗ್ರಿಗಳು:
ಅಕ್ಕಿ
ಮೆಂತ್ಯೆ
ಜೀರಿಗೆ,
ಧನಿಯಾ
ಕಾಳು ಮೆಣಸು
ಒಣ ಮೆಣಸಿನಕಾಯಿ.
ಎಣ್ಣೆ ಅಥವಾ ತುಪ್ಪ,
ಸಾಸಿವೆ
ಕಡ್ಲೆಬೇಳೆ
ಉದ್ದಿನಬೇಳೆ
ಈರುಳ್ಳಿ
ಕರಿಬೇವು
ಅರಿಶಿನ
ಚಿಟಿಕೆ
ನೀರು
ಉಪ್ಪು
ಕಾಯಿತುರಿ

ಮಾಡುವ ವಿಧಾನ:

ಒಂದು ಬಾಣಲೆಯಲ್ಲಿ ಯಾವುದೇ ಹಾಕದೆ ಮೆಂತ್ಯ ಕಾಳು, ಜೀರಿಗೆ, ಧನಿಯಾ, ಕಾಳು ಮೆಣಸು ಮತ್ತು ಒಣ ಮೆಣಸಿನಕಾಯಿಯನ್ನು ಸಣ್ಣ ಉರಿಯಲ್ಲಿ ಜಾಗರೂಕತೆಯಿಂದ ಹುರಿಯಬೇಕು. ಇವು ತಣ್ಣಗಾದ ನಂತರ ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ಪುಡಿ ಮಾಡಿ ಪಕ್ಕಕ್ಕೆ ಎತ್ತಿಟ್ಟುಕೊಳ್ಳಬೇಕು. ಬಳಿಕ ಒಂದು ಕುಕ್ಕರ್‌ನಲ್ಲಿ ಎಣ್ಣೆ ಅಥವಾ ತುಪ್ಪವನ್ನು ಕಾಯಿಸಿ. ಸಾಸಿವೆ, ಕಡ್ಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ ಕೆಂಪಾಗುವವರೆಗೆ ಹುರಿಯಬೇಕು. ನಂತರ ಇಂಗು, ಕರಿಬೇವು ಮತ್ತು ಹೆಚ್ಚಿದ ಈರುಳ್ಳಿ ಸೇರಿಸಿ, ಈರುಳ್ಳಿ ಮೃದುವಾಗುವವರೆಗೆ ಬಾಡಿಸಿಕೊಳ್ಳಬೇಕು.

ನಂತರ ಅರಿಶಿನ ಮತ್ತು ಮೊದಲೇ ಸಿದ್ಧಪಡಿಸಿಟ್ಟುಕೊಂಡ ಮೆಂತ್ಯ ಮಸಾಲೆ ಪುಡಿಯನ್ನು ಹಾಕಿ ಕಡಿಮೆ ಉರಿಯಲ್ಲಿ 30 ಸೆಕೆಂಡ್ ಕೈಯಾಡಿಸಿದ ನಂತರ ಅಕ್ಕಿಯನ್ನು ಹಾಕಿ ಒಗ್ಗರಣೆಯಲ್ಲಿ 1 ನಿಮಿಷ ಮೃದುವಾಗಿ ಕೈಯಾಡಿಸಬೇಕು. ಬಳಿಕ ಕೊನೆಯದಾಗಿ 2 ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಯಿತುರಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕುಕ್ಕರ್ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 2 ವಿಸಿಲ್ ಕೂಗಿಸಿದರೆ. ಘಮಘಮಿಸುವ ಮೆಂತ್ಯ ಅನ್ನ ಸಿದ್ಧ. ಇದನ್ನು ಬಿಸಿ ತುಪ್ಪ ಮತ್ತು ಹಪ್ಪಳದೊಂದಿಗೆ ಸವಿಯಲು ಅತ್ಯುತ್ತಮವಾಗಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !