May 14, 2026
Thursday, May 14, 2026
spot_img

ಯಾರದಪ್ಪಾ ಅದು ಚಿನ್ನದ ಸರ….?: ಆಟದ ಮಧ್ಯೆ ಪಡಿಕ್ಕಲ್ ಕೈ ಸೇರಿದ ಗೋಲ್ಡ್ ಚೈನ್ ಯಾರದ್ದು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಸೆಣಸಾಟ ಅಭಿಮಾನಿಗಳಿಗೆ ರೋಚಕ ಕ್ಷಣಗಳನ್ನು ನೀಡಿತು. ಆದರೆ ಪಂದ್ಯದ ನಡುವೆ ನಡೆದ ಒಂದು ಸಣ್ಣ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ಪಡೆಯುತ್ತಿದೆ.

ಆರ್‌ಸಿಬಿ ಇನ್ನಿಂಗ್ಸ್ ವೇಳೆ ಕೆಕೆಆರ್ ವೇಗಿ ಕಾರ್ತಿಕ್ ತ್ಯಾಗಿ ಎಸೆದ ಬೌನ್ಸರ್ ಜೇಕಬ್ ಬೆಥೆಲ್ ಹೆಲ್ಮೆಟ್‌ಗೆ ಬಲವಾಗಿ ಬಡಿದಿತ್ತು. ಚೆಂಡು ಗಾಳಿಯಲ್ಲಿ ಏರಿ ಕ್ಯಾಚ್ ಆಗುತ್ತಿದ್ದಂತೆ ಬೆಥೆಲ್ ಔಟಾದರು. ಇದೇ ವೇಳೆ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ತುಂಡಾಗಿ ಪಿಚ್ ಮೇಲೆ ಬಿದ್ದಿತ್ತು. ಆದರೆ ಔಟಾದ ನಿರಾಶೆಯಲ್ಲಿ ಬೆಥೆಲ್ ಅದನ್ನು ಗಮನಿಸದೇ ಪೆವಿಲಿಯನ್‌ಗೆ ತೆರಳಿದರು.

ಇದನ್ನೂ ಓದಿ:

ನಂತರ ಬ್ಯಾಟಿಂಗ್‌ಗೆ ಬಂದ ದೇವದತ್ ಪಡಿಕ್ಕಲ್ ಪಿಚ್ ಪರಿಶೀಲನೆ ವೇಳೆ ನೆಲದಲ್ಲಿ ಬಿದ್ದಿದ್ದ ಚಿನ್ನದ ಸರ ಗಮನಿಸಿದರು. ತಕ್ಷಣವೇ ಅದನ್ನು ಎತ್ತಿಕೊಂಡು ಅಂಪೈರ್‌ಗಳಿಗೆ ಸುರಕ್ಷಿತವಾಗಿ ಹಸ್ತಾಂತರಿಸಿದರು. ಈ ಮೂಲಕ ಸರವನ್ನು ಮರಳಿ ಬೆಥೆಲ್‌ಗೆ ತಲುಪುವಂತೆ ಮಾಡಿದರು.

ಪಡಿಕ್ಕಲ್ ಅವರ ಈ ಪ್ರಾಮಾಣಿಕ ನಡೆಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಕ್ರೀಡಾಸ್ಫೂರ್ತಿಗೆ ಇದು ಉತ್ತಮ ಉದಾಹರಣೆ ಎಂದು ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !