July 23, 2026
Thursday, July 23, 2026
spot_img

Healthy Drink | ಚಿಯಾ ಸೀಡ್ಸ್ ಮ್ಯಾಂಗೋ ಮಿಲ್ಕ್‌ಶೇಕ್: ಒಮ್ಮೆ ಟ್ರೈ ಮಾಡಿ

ಸಂಜೆ ಹೊತ್ತಲ್ಲಿ ತಂಪಾಗಿ, ರುಚಿಯಾಗಿ ಮತ್ತು ಆರೋಗ್ಯಕರವಾಗಿ ಏನಾದರೂ ಕುಡಿಯಬೇಕು ಅನ್ನಿಸಿದ್ರೆ ಈ ಚಿಯಾ ಸೀಡ್ಸ್ ಮ್ಯಾಂಗೋ ಮಿಲ್ಕ್‌ಶೇಕ್ ಟ್ರೈ ಮಾಡಿ. ಚಿಯಾ ಬೀಜಗಳಲ್ಲಿ ಫೈಬರ್, ಒಮೆಗಾ-3 ಮತ್ತು ಪ್ರೋಟೀನ್ ಅಧಿಕವಾಗಿದ್ದು, ಮಾವಿನ ಹಣ್ಣಿನ ಸಿಹಿ ರುಚಿಯ ಜೊತೆ ಸೇರಿ ಈ ಶೇಕ್ ಇನ್ನಷ್ಟು tasty ಆಗುತ್ತದೆ.

ಬೇಕಾಗುವ ಪದಾರ್ಥಗಳು

ಚಿಯಾ ಬೀಜಗಳು – 2 ಚಮಚ
ಹಾಲು – 1 ಮತ್ತು 1/2 ಕಪ್
ಮಾವಿನ ಹಣ್ಣಿನ ತುಂಡುಗಳು – 1 ಕಪ್
ಜೇನುತುಪ್ಪ ಅಥವಾ ಸಕ್ಕರೆ – 1 ಚಮಚ
ಐಸ್ ತುಂಡುಗಳು – ಬೇಕಿದ್ದರೆ

ತಯಾರಿಸುವ ವಿಧಾನ

ಮೊದಲು ಒಂದು ಸಣ್ಣ ಬಟ್ಟಲಿನಲ್ಲಿ ಚಿಯಾ ಬೀಜಗಳಿಗೆ ಅರ್ಧ ಕಪ್ ಹಾಲು ಸೇರಿಸಿ 20 ರಿಂದ 30 ನಿಮಿಷಗಳ ಕಾಲ ನೆನೆಸಿಡಿ. ಚಿಯಾ ಬೀಜಗಳು ಜೆಲ್ ತರಹ ಉಬ್ಬಿಕೊಂಡು soft ಆಗುತ್ತವೆ.

ನಂತರ ಬ್ಲೆಂಡರ್ ಜಾರ್‌ಗೆ ಉಳಿದ ಹಾಲು, ಮಾವಿನ ಹಣ್ಣಿನ ತುಂಡುಗಳು ಮತ್ತು ಜೇನುತುಪ್ಪ ಅಥವಾ ಸಕ್ಕರೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಈಗ ಸಿದ್ಧವಾದ ಮ್ಯಾಂಗೋ ಮಿಲ್ಕ್‌ಶೇಕ್‌ಗೆ ನೆನೆಸಿದ ಚಿಯಾ ಬೀಜಗಳನ್ನು ಸೇರಿಸಿ ಚೆನ್ನಾಗಿ ಕಲಸಿ. ಬೇಕಿದ್ದರೆ ಐಸ್ ತುಂಡುಗಳನ್ನು ಹಾಕಿ ತಂಪಾಗಿ ಸರ್ವ್ ಮಾಡಿ.

ಆರೋಗ್ಯಕರ ಪ್ರಯೋಜನಗಳು:

ಈ ಶೇಕ್‌ನಲ್ಲಿ ಫೈಬರ್, ಕ್ಯಾಲ್ಸಿಯಂ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !