May 14, 2026
Thursday, May 14, 2026
spot_img

ಚಿನ್ನಾಭರಣ ತಯಾರಿಕೆ ಮಳಿಗೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಇಬ್ಬರಿಗೆ ಗಾಯ

ಹೊಸದಿಗಂತ ವರದಿ ವಿಜಯಪುರ:

ಚಿನ್ನಾಭರಣ ತಯಾರಿಕೆ ಮಳಿಗೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅಕ್ಕಸಾಲಿಗರಿಬ್ಬರು ಗಾಯಗೊಂಡಿರುವ ಘಟನೆ ನಗರದ ಸರಾಫ್ ಬಜಾರ್‌ನ ಅಂಗಡಿಯೊಂದರಲ್ಲಿ ಗುರುವಾರ ನಡೆದಿದೆ.

ಬಂಗಾಳ ಮೂಲದ ಬೀಜು (38), ನಾನಾ ಹಕ್ಕಿಂ (40) ಗಾಯಗೊಂಡ ಅಕ್ಕಸಾಲಿಗರು.

ಇಲ್ಲಿನ ಶಿರೂರ ಕಾಂಪ್ಲೆಕ್ಸ್ ನ ಚಿನ್ನಾಭರಣ ತಾಯಾರಿಕ ಮಳಿಗೆಯಲ್ಲಿ ಚಿನ್ನದ ಕುಲುಮೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟ್‌ಗೊಂಡಿದ್ದು, ಈ ಇಬ್ಬರು ಅಕ್ಕಸಾಲಿಗರ ಮೈಗೆ ಸುಟ್ಟು ಗಾಯವಾಗಿದೆ.

ಇದನ್ನೂ ಓದಿ:

ಗಾಯಗೊಂಡವರನ್ನು ಆಟೋ ಮೂಲಕ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ನೀಡಲಾಗಿದೆ. ಯಾವುದೇ ರೀತಿಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ.

ಗ್ಯಾಸ್ ಸಿಲಿಂಡರ್ ಸ್ಫೋಟದ ತೀವ್ರತೆಗೆ ಚಿನ್ನದ ಅಂಗಡಿ ಶೆಟರ್ ಒಡೆದು ಹೋಗಿದ್ದು, ಪಕ್ಕದ ಅಂಗಡಿಗೂ ಹಾನಿಗೊಳಿಸಿದೆ. ಈ ಸ್ಫೋಟದ ಸದ್ದಿಗೆ ಸರಾಫ್ ಬಜಾರ್ ಜನರು ಗಾಬರಿಗೊಂಡು, ಮಳಿಗೆ ಎದುರು ಗುಂಪಾಗಿ ಸೇರಿದ್ದರು. ಅಲ್ಲದೆ ಈ ಸ್ಫೋಟದ ದೃಶ್ಯ ಇಲ್ಲಿನ ಗಿಪ್ಟ್ ಸೆಂಟರ್‌ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯ ನೋಡಿದವರಲ್ಲಿ ಆತಂಕ ಮೂಡಿಸುವಂತಾಗಿದೆ.

ನಗರದ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !