October 10, 2026
Saturday, October 10, 2026
spot_img

ಕಾವೇರಿ ನದಿಗೆ ಹಾರಿ ಆತ್ಮಹ*ತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಣೆ

ಹೊಸದಿಗಂತ ವರದಿ ಶ್ರೀರಂಗಪಟ್ಟಣ:

ಕಾವೇರಿ ನದಿಗೆ ಹಾರಿ ಆತ್ಮ ಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರನ್ನ ಅಗ್ನಿ ಶಾಮಕ ಸಿಬ್ಬಂದಿ ರಕ್ಷಿಸಿರುವ ಘಟನೆ ಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ನಡೆದಿದೆ.

ಟಿ ನರಸೀಪುರ ತಾಲೂಕಿನ ಸೊಸಲೆ ಹೋಬಳಿಯ ನಾಗಲಗೆರೆ ಗ್ರಾಮದ ನಿವಾಸಿ ವನಿತಾ (35) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಎಂದು ತಿಳಿದು ಬಂದಿದೆ.

ಈಕೆ ವೆಲ್ಲೆಸ್ಲೀ ಸೇತುವೆ ಬಳಿ ಅತ್ತಿತ್ತಾ ಓಡಾಟ ನಡೆಸಿ ನಂತರ ಕಾವೇರಿ ನದಿಗೆ ಹಾರಿದ್ದಾರೆ. ಅಕ್ಕ ಪಕ್ಕಲ್ಲಿದ್ದ ಸಾರ್ವಜನಿಕರು ನೋಡಿ ತಕ್ಷಣ ಪೊಲೀಸರು ಹಾಗೂ ಅಗ್ನಿ ಶಾಮಕದಳ ಸಿಬ್ಬಂದಿಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

ತಕ್ಷಣ ಪೊಲೀಸರು ಹಾಗೂ ಅಗ್ನಿ ಶಾಮಕದಳ ಸಿಬ್ಬಂದಿ ಲೀಡಿಂಗ್ ಫೈರ್ ಫೈಟರ್ ಅನಂತ್ ಕೆ.ಎಂ, ಲೀಡಿಂಗ್ ಫೈಟರ್ ವೆಂಕಟೇಶ್.ಟಿ ಅಗ್ನಿಶಾಮಕ ಚಾಲಕ ಬಸವರಾಜ್ ಅಂಗಡಿ ಅಗ್ನಿಶಾಮಕ ವಿಶ್ವಾಸ್ ರವರ ತಂಡ ಕಾರ್ಯ ಪ್ರೌವೃತ್ತರಾಗಿ ಬೋಟ್ ಸಹಾಯದಿಂದ ಮಹಿಳೆಯನ್ನು ಜೀವಂತವಾಗಿ ರಕ್ಷಿಸುವಲ್ಲಿ ಯಶಸ್ವಿಯಾದರು.

ನಂತರ ಮಹಿಳೆಯನ್ನು ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read