May 16, 2026
Saturday, May 16, 2026
spot_img

ಉತ್ತರ ಕಾಶಿಯಲ್ಲಿ ಭೂಮಿ ಕಂಪಿಸಿದ ಅನುಭವ : ಮನೆಯಿಂದ ಹೊರಕ್ಕೆ ಓಡೋಡಿ ಬಂದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರಕಾಶಿಯ ಜಿಲ್ಲಾ ಕೇಂದ್ರದಲ್ಲಿ ತಡರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಮನೆಯಿಂದ ಜನ ಹೊರಗೆ ಓಡಿ ಬಂದಿದ್ದಾರೆ.

ಮಲಗಿದ್ದವರಿಗೆ ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆಯೇ ಗಾಬರಿಯಿಂದ ಜನ ಹೊರಕ್ಕೆ ಓಡಿ ಬಂದಿದ್ದಾರೆ. ಭೂಕಂಪದ ತೀವ್ರತೆ ಕಡಿಮೆ ಇದ್ದ ಕಾರಣ ಯಾವುದೇ ಪ್ರಾಣಹಾನಿ ಆಗಿಲ್ಲ.

ರಿಕ್ಟರ್‌ ಮಾಪಕದಲ್ಲಿ 2.4 ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ಜಿಲ್ಲಾ ಕೇಂದ್ರದಿಂದ ನಾಲ್ಕು ಕಿಲೋಮೀಟರ್‌ ಈಶಾನ್ಯಕ್ಕೆ ಇದೆ.

ಉತ್ತರಕಾಶಿ ಜಿಲ್ಲೆ ಭೂಕಂಪನ ಸೂಕ್ಷ್ಮ ವಲಯದೊಳಗೆ ಬರುತ್ತದೆ. ಹಿಮಾಲಯ ಪ್ರದೇಶದಲ್ಲಿನ ಭೂವೈಜ್ಞಾನಿಕ ಚಟುವಟಿಕೆಯಿಂದಾಗಿ ನಿಯತಕಾಲಿಕವಾಗಿ ಲಘು ಭೂಕಂಪನಗಳು ಸಂಭವಿಸುತ್ತಲೆ ಇರುತ್ತವೆ. ಭೂಮಿಯೊಳಗೆ ಸಂಗ್ರಹವಾದ ಶಕ್ತಿಯನ್ನು ಬಿಡುಗಡೆ ಮಾಡಲು ಸಣ್ಣ ಭೂಕಂಪಗಳು ಹೆಚ್ಚಾಗಿ ಸಹಾಯ ಮಾಡುತ್ತವೆ ಎಂದು ತಜ್ಞರು ಹೇಳುತ್ತಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !