July 21, 2026
Tuesday, July 21, 2026
spot_img

ಪ್ರಧಾನಿ ಮೋದಿ ಕರೆಗೆ ಸ್ಪಂದನೆ: ಬೆಂಗಾವಲು ವಾಹನ ಕಡಿತಕ್ಕೆ ಮುಂದಾದ ಸಿಎಂ ಸಿದ್ದರಾಮಯ್ಯ ಸಲಹೆಗಾರ ಪೊನ್ನಣ್ಣ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಕೊರತೆ ಹೆಚ್ಚುತ್ತಿದ್ದು, ಭಾರತದಲ್ಲೂ ಇದರ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆ ಪ್ರಧಾನಿ ಮೋದಿ ಅವರು ಕೆಲವು ದಿನಗಳ ಹಿಂದೆ ಇಂಧನಗಳ ಮಿತ ಬಳಕೆಗೆ ಕರೆ ನೀಡಿದ್ದು, ಉತ್ತಮ ಸ್ಪಂದನೆ ಸಿಗುತ್ತಿದೆ.

ಖುದ್ದು ಪ್ರಧಾನಿ ಸೇರಿದಂತೆ ಕೇಂದ್ರದ ಸಚಿವರು ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯಲ್ಲಿ ಕಡಿತಗೊಳಿಸಿದ್ದಾರೆ.

ಆದ್ರೆ ಪ್ರಧಾನಿ ಅವರ ಕರೆಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ಮದ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರೂ, ವಿರಾಜಪೇಟೆ ಶಾಸಕರೂ ಆಗಿರುವ ಎ.ಎಸ್​.ಪೊನ್ನಣ್ಣ ಅವರು ಬೆಂಬಲ ನೀಡಿದ್ದಾರೆ. ಪಕ್ಷಕ್ಕಿಂತ ದೇಶ ಮೊದಲು ಎನ್ನುವ ಚಿಂತನೆಯಲ್ಲಿ ತಮ್ಮ ಬೆಂಗಾವಲು ವಾಹನ ಕಡಿತಗೊಳಿಸುವಂತೆ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ.

ದೇಶದಲ್ಲಿ ತೈಲ ಬಿಕ್ಕಟ್ಟು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಬೆಂಗಾವಲು ವಾಹನ ಕಡಿತಗೊಳಿಸುವಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಎಲ್ಲೆಡೆ ಪತ್ರ ವೈರಲ್​ ಆಗುತ್ತಿದ್ದು, ಜೊತೆಗೆ ಎ.ಎಸ್​.ಪೊನ್ನಣ್ಣ ಅವರ ನಡೆಗೆ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !