ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಪಾಕಿಸ್ತಾನಕ್ಕೆ ಆಘಾತ ಎದುರಾಗಿದ್ದು, ತಂಡ ಸ್ಟಾರ್ ವೇಗಿ ಹಸನ್ ಅಲಿ ತಲೆಗೆ ಗಂಭೀರ ಗಾಯವಾಗಿದೆ.
ಸಿಲ್ಹೆಟ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ಬೌಲಿಂಗ್ ಮಾಡಿಕೊಂಡಿತ್ತು. ಅದರಂತೆ ಎಂಟನೇ ಓವರ್ನಲ್ಲಿ ಹಸನ್, ಬಾಂಗ್ಲಾ ಬ್ಯಾಟ್ಸ್ ಮ್ಯಾನ್ ತಮೀಮ್ಗೆ ಬೌಲಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಬ್ಯಾಟ್ಸ್ ಮ್ಯಾನ್ ಬಾರಿಸಿದ ಚೆಂಡನ್ನು ಕ್ಯಾಚ್ ಹಿಡಿಯುವ ಪ್ರಯತ್ನದಲ್ಲಿ ಹಸನ್ ಮುಂದಕ್ಕೆ ಹಾರಿದ್ದು, ಈ ವೇಳೆ ಬ್ಯಾಲೆನ್ಸ್ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ. ಇದರಿಂದ ಅವರ ತಲೆಗೆ ಗಂಭೀರ ಗಾಯವಾಗಿದೆ. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಸ್ಟ್ರೆಚರ್ ಮೂಲಕ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು.



