ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಹೊಸ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ತಮ್ಮ ವಿಭಿನ್ನ ಕಾರ್ಯಶೈಲಿಯಿಂದ ಜನರ ಗಮನ ಸೆಳೆದಿದ್ದಾರೆ.
ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್ ಆಗಿದ್ದ ವಿಜಯ್, ಈಗ ರಾಜಕೀಯದಲ್ಲೂ ಶಿಸ್ತು ಮತ್ತು ಸಮಯ ಪ್ರಜ್ಞೆ ಮೂಲಕ ಹೊಸ ಮಾದರಿ ನಿರ್ಮಿಸುತ್ತಿದ್ದಾರೆ.
ಮೇ 10ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ವಿಜಯ್ ಪ್ರತಿದಿನ ಕಚೇರಿ ಸಮಯಕ್ಕಿಂತ 15 ನಿಮಿಷ ಮುಂಚೆಯೇ ಸಚಿವಾಲಯಕ್ಕೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ರಾಜಕಾರಣಿಗಳ ಕಾರ್ಯಶೈಲಿಗಿಂತ ಭಿನ್ನವಾಗಿರುವ ಈ ನಡೆ ಅಧಿಕಾರಿಗಳಲ್ಲೂ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ:
ಇದರ ಜೊತೆಗೆ ಅವರು ಮನೆಯಿಂದಲೇ ಊಟದ ಡಬ್ಬಿ ತರುತ್ತಿರುವುದು ಮತ್ತಷ್ಟು ಗಮನ ಸೆಳೆದಿದೆ. ಮಧ್ಯಾಹ್ನ ಊಟದ ಬಳಿಕವೂ ತಕ್ಷಣ ಕೆಲಸಕ್ಕೆ ಮರಳುತ್ತಿರುವ ವಿಜಯ್, ಕಡತಗಳನ್ನು ಸ್ವತಃ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸುವುದು ಹಾಗೂ ಚುನಾವಣಾ ವೇಳೆ ನೀಡಿದ ಭರವಸೆಗಳನ್ನು ಈಡೇರಿಸುವತ್ತ ಅವರು ಹೆಚ್ಚು ಗಮನ ಹರಿಸಿದ್ದಾರೆ. ದೇವಸ್ಥಾನ ಹಾಗೂ ಶಾಲೆಗಳ ಸಮೀಪದ ವೈನ್ ಶಾಪ್‌ಗಳನ್ನು ಮುಚ್ಚಿಸಿರುವ ಕ್ರಮಕ್ಕೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ವಿಜಯ್ ಅವರ ಆಡಳಿತ ಶೈಲಿ ತಮಿಳುನಾಡಿನಲ್ಲಿ ಹಾಟ್ ಟಾಪಿಕ್ ಆಗಿದೆ.



