ಹಾಲು ಪ್ರಕೃತಿ ನೀಡಿರುವ ಸಂಪೂರ್ಣ ಆಹಾರ. ಇದರಲ್ಲಿ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಜೀವಸತ್ವಗಳು ಹೇರಳವಾಗಿವೆ. ಹಿಂದಿನ ಕಾಲದಿಂದಲೂ ಗ್ರಾಮೀಣ ಭಾಗಗಳಲ್ಲಿ ಬೆಳಗ್ಗಿನ ಅವಧಿಯಲ್ಲಿ ಹಸಿ ಹಾಲನ್ನು ಕುಡಿಯುವ ಪದ್ಧತಿ ರೂಢಿಯಲ್ಲಿದೆ. ಹಸಿ ಹಾಲು ಕುಡಿಯುವುದರಿಂದ ಹಾಲಿನಲ್ಲಿರುವ ನೈಸರ್ಗಿಕ ಎಂಜೈಮ್‌ಗಳು ಮತ್ತು ಪೋಷಕಾಂಶಗಳು ನಾಶವಾಗದೆ ದೇಹಕ್ಕೆ ನೇರವಾಗಿ ಸಿಗುತ್ತವೆ ಎಂಬುದು ಅನೇಕರ ನಂಬಿಕೆ. ಆದರೆ, ಇಂದಿನ ವೈದ್ಯಕೀಯ ಮತ್ತು ಆಹಾರ ವಿಜ್ಞಾನದ ಪ್ರಕಾರ, ಹಸಿ ಹಾಲಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇರಬಹುದಾಗಿದ್ದು, ಇದು ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡಬಹುದು. ಆದ್ದರಿಂದ, ಹಸಿ ಹಾಲು ಸೇವನೆಯಿಂದ ಉಂಟಾಗಬಹುದಾದ ಆರೋಗ್ಯದ ಅಪಾಯಗಳ ಬಗ್ಗೆ ತಿಳಿಯುವುದು ಅತ್ಯಂತ ಅವಶ್ಯಕವಾಗಿದೆ.
ಹಸಿ ಹಾಲು ಸೇವನೆಯಿಂದ ಉಂಟಾಗಬಹುದಾದ ಆರೋಗ್ಯದ ಅಪಾಯಗಳು:
ಹಸಿ ಹಾಲು ನೇರವಾಗಿ ಪ್ರಾಣಿಗಳ ಮಡಿಯಿಂದ ಬರುವುದರಿಂದ ಅದರಲ್ಲಿ ಅಪಾಯಕಾರಿ ರೋಗಕಾರಕ ಸೂಕ್ಷ್ಮಾಣುಜೀವಿಗಳು ಸುಲಭವಾಗಿ ಬೆಳೆಯುತ್ತವೆ.
ಇದರಲ್ಲಿರುವ ಇ.ಕೋಲಿ ತೀವ್ರ ರಕ್ತಸಿಕ್ತ ಅತಿಸಾರ ಮತ್ತು ಹೊಟ್ಟೆ ನೋವಿಗೆ ಕಾರಣವಾಗುತ್ತದೆ ಹಾಗೂ ಸಾಲ್ಮೊನೆಲ್ಲಾ ತೀವ್ರ ಜ್ವರ, ವಾಂತಿ ಮತ್ತು ಇಡೀ ದೇಹದ ದೌರ್ಬಲ್ಯವನ್ನು ಉಂಟುಮಾಡುತ್ತದೆ. ಲಿಸ್ಟೇರಿಯಾ ಇದು ಮೆದುಳಿನ ಪದರಗಳಿಗೆ ಹಾನಿ ಮಾಡುವ ಶಕ್ತಿ ಹೊಂದಿದೆ. ಕ್ಯಾಂಪಿಲೋಬ್ಯಾಕ್ಟರ್ ದೇಹದಲ್ಲಿ ತೀವ್ರ ನಿರ್ಜಲೀಕರಣ ಉಂಟುಮಾಡುತ್ತದೆ.
ಇ.ಕೋಲಿ ಬ್ಯಾಕ್ಟೀರಿಯಾವು ದೇಹದಲ್ಲಿ ‘ಹಿಮೋಲಿಟಿಕ್ ಯುರೆಮಿಕ್ ಸಿಂಡ್ರೋಮ್’ ಉಂಟುಮಾಡಿ ಕಿಡ್ನಿಗಳನ್ನು ನಿಷ್ಕ್ರಿಯಗೊಳಿಸಬಹುದು.
ಕೆಲವು ವಿಶಿಷ್ಟ ಬ್ಯಾಕ್ಟೀರಿಯಾಗಳು ರಕ್ತದ ಮೂಲಕ ಮೆದುಳು ಮತ್ತು ಹೃದಯಕ್ಕೆ ಹಾನಿ ಮಾಡಿ ಪಾರ್ಶ್ವವಾಯು ಅಥವಾ ಸಾವಿಗೂ ಕಾರಣವಾಗಬಹುದು ಹಾಗೂ ದೀರ್ಘಕಾಲದ ಮೂಳೆ ಮತ್ತು ಕೀಲು ನೋವಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಗರ್ಭಿಣಿಯರು ಹಸಿ ಹಾಲು ಕುಡಿಯುವುದರಿಂದ ಅದರಲ್ಲಿರುವ ಲಿಸ್ಟೇರಿಯಾ ಬ್ಯಾಕ್ಟೀರಿಯಾದಿಂದಾಗಿ ಗರ್ಭಪಾತ ಆಗುವ ಅಥವಾ ನವಜಾತ ಶಿಶು ಮರಣ ಹೊಂದುವ ಗಂಭೀರ ಅಪಾಯವಿರುತ್ತದೆ.
ಇದರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬ್ಯಾಕ್ಟೀರಿಯಾಗಳು ಬೇಗನೆ ದಾಳಿ ಮಾಡುತ್ತವೆ. ಆದ್ದರಿಂದ ಮಕ್ಕಳು ಮತ್ತು ವೃದ್ದರು ಕುಡಿಯುವುದು ಅಪಾಯಕಾರಿ.



