August 21, 2026
Friday, August 21, 2026
spot_img

RCB ಕ್ರೇಜ್‌ಗೆ ಹೈದರಾಬಾದ್ ಶಾಕ್ | ಟಿಕೆಟ್ ಬೆಲೆ ಡಬಲ್: ನಿಮಿಷಗಳಲ್ಲಿ ಎಲ್ಲಾ ಖಾಲಿ..ಖಾಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಭಾರೀ ಕ್ರೇಜ್ ಸೃಷ್ಟಿಯಾಗಿದ್ದು, ಹೈದರಾಬಾದ್‌ನಲ್ಲೂ ಟಿಕೆಟ್‌ಗಳಿಗೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಮೇ 22ರಂದು ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯಕ್ಕಾಗಿ ಟಿಕೆಟ್ ದರಗಳನ್ನು ಭಾರೀ ಪ್ರಮಾಣದಲ್ಲಿ ಏರಿಸಲಾಗಿದೆ.

ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್

ಝೊಮಾಟೊ ಡಿಸ್ಟ್ರಿಕ್ಟ್ ಆ್ಯಪ್‌ನಲ್ಲಿ ಶುಕ್ರವಾರ ಸಂಜೆ ಟಿಕೆಟ್ ಬುಕ್ಕಿಂಗ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಸುಮಾರು 39 ಸಾವಿರ ಆಸನ ಸಾಮರ್ಥ್ಯದ ಸ್ಟೇಡಿಯಂಗೆ 2.5 ಲಕ್ಷಕ್ಕೂ ಹೆಚ್ಚು ಮಂದಿ ವೇಟಿಂಗ್ ಲಿಸ್ಟ್‌ನಲ್ಲಿ ಇದ್ದರು ಎನ್ನಲಾಗಿದೆ.

ಇದನ್ನೂ ಓದಿ:

ಗಗನಕ್ಕೇರಿದ ಟಿಕೆಟ್ ಬೆಲೆ

ಈ ಹಿಂದೆ 950 ರೂ. ಇದ್ದ ಟಿಕೆಟ್‌ಗಳನ್ನು 2000 ರೂ.ಗೆ ಏರಿಸಲಾಗಿದೆ. 1500 ರೂ. ದರದ ಫಸ್ಟ್ ಟೆರೇಸ್ ಟಿಕೆಟ್ ಇದೀಗ 3000 ರೂ. ಆಗಿದೆ. 1910 ರೂ. ಟಿಕೆಟ್‌ ಬೆಲೆ 3500 ರೂ., 2500 ರೂ. ಟಿಕೆಟ್ 4500 ರೂ.ಗೆ ತಲುಪಿದೆ. ಅದೇ ರೀತಿ 30 ಸಾವಿರ ರೂ. ದರದ ಪ್ರೀಮಿಯಂ ಟಿಕೆಟ್ ಈಗ 45 ಸಾವಿರ ರೂ.ಗೆ ಮಾರಾಟವಾಗಿದೆ.

ಪಂಜಾಬ್ ವಿರುದ್ಧದ ಗೆಲುವಿನ ಬಳಿಕ ಆರ್‌ಸಿಬಿ ಈಗಾಗಲೇ ಪ್ಲೇಆಫ್ ಪ್ರವೇಶಿಸಿದೆ. ಇನ್ನೊಂದೆಡೆ ಎಸ್‌ಆರ್‌ಹೆಚ್ ತಂಡಕ್ಕೆ ಪ್ಲೇಆಫ್ ಆಸೆ ಜೀವಂತವಾಗಿರಲು ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !