ಮನೆಗೆ ಮೊದಲ ಬಾರಿ ಯಾವುದೇ ಅತಿಥಿಗಳು ಬಂದಾಗ ಅವರು ನಮ್ಮ ಮನೆಯನ್ನು ನೋಡಿ ಇಷ್ಟಪಡಲಿ, ನಮ್ಮ ಮನೆಯ ವಸ್ತುಗಳನ್ನು ಹೊಗಳಲಿ, ನಾವು ಮನೆಯನ್ನು ಇಟ್ಟುಕೊಂಡ ರೀತಿ ಅವರಿಗೂ ಇಷ್ಟವಾಗಲಿ ಎನ್ನುವುದು ಎಲ್ಲರ ಆಲೋಚನೆ ಆಗಿರುತ್ತದೆ. ಆದರೆ ಕೆಲವೊಮ್ಮೆ ಎಲ್ಲವನ್ನೂ ಪರ್ಫೆಕ್ಟ್ ಮಾಡುವ ಮಧ್ಯೆ ಮುಖ್ಯವಾದ ವಿಷಯಗಳನ್ನು ಮರೆತುಬಿಡುತ್ತೀವಿ. ಜನರು ಮನೆಗೆ ಮೊದಲ ಬಾರಿ ಬಂದಾಗ ಏನನ್ನು ನೋಡುತ್ತಾರೆ? ಹೇಗೆ ಇಂಪ್ರೆಸ್ ಆಗುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ..
ನೀವು ಮನೆಯನ್ನು ಎಷ್ಟೇ ಅದ್ಭುತ ಹಾಗೂ ದುಬಾರಿ ಡೆಕೋರ್‌ಗಳಲ್ಲಿ ತುಂಬಿಡಿ. ಜನರು ಮೊದಲು ಗಮನಿಸುವುದು ಸ್ವಚ್ಛತೆ. ನಿಮ್ಮ ಮನೆ ಕ್ಲೀನ್ ಆಗಿದೆಯಾ? ನೆಲ ಹೇಗಿದೆ? ಶೋಕೇಸ್ ಮೇಲೆ ಧೂಳು ಕುಳಿತಿದೆಯೇ? ಇಂತವುಗಳನ್ನು ಜನರು ಗಮನಿಸುತ್ತಾರೆ.

ಮನೆಗೆ ಎಂಟ್ರಿ ಕೊಟ್ಟ ತಕ್ಷಣ ನಿಮ್ಮ ಮನೆ ಹೇಗೆ ವಾಸನೆ ಬರುತ್ತಿದೆ ಎನ್ನುವುದು ಮುಖ್ಯ. ಒದ್ದೆ ಬಟ್ಟೆಯ ವಾಸನೆ, ಬಾತ್‌ರೂಮಿನಿಂದ ದುರ್ಗಂಧ, ಅಡುಗೆ ಮನೆಯ ಘಾಟು ಮೊದಲ ಇಂಪ್ರೆಷನ್‌ನ್ನು ಹಾಳುಮಾಡಬಹುದು. ಮನೆಯೆಲ್ಲಾ ಕ್ಲೀನ್ ಆದ ನಂತರ ರೂಮ್ ಫ್ರೆಶನರ್ ಸ್ಪ್ರೇ ಮಾಡುವುದು ಉತ್ತಮ.

ಮನೆ ಎಷ್ಟೇ ಕ್ಲೀನ್ ಇರಲಿ ಬಾತ್‌ರೂಮ್ ಗಲೀಜಾಗಿದ್ದರೆ ಮನೆ ಕೆಟ್ಟದಾಗಿಯೇ ಅನಿಸುತ್ತದೆ. ಮನೆಗೆ ಬರುವ ಅತಿಥಿಗಳು ನೇರ ಫ್ರೆಶ್ ಅಪ್ ಆಗಲು ಬಾತ್‌ರೂಮ್‌ಗೆ ಹೋಗುತ್ತಾರೆ. ಬಾತ್‌ರೂಮ್ ಸ್ವಚ್ಛ ಹಾಗೂ ಘಮ ಇದ್ದರೆ ಇಡೀ ಮನೆಯೇ ಸ್ವಚ್ಛವಾದಂತೆ.

ಮನೆಗೆ ಬರುವ ಜನರು ಮೊದಲು ನಿಮ್ಮ ಹೊಸ್ತಿಲು, ಹೊರಗಡೆ ಏರಿಯಾ, ನಿಮ್ಮ ಗಿಡಗಳು, ದೇವರ ಫೋಟೊ ಏನನ್ನು ಇಟ್ಟಿದ್ದೀರೋ ಎಲ್ಲವನ್ನೂ ಗಮನಿಸುತ್ತಾರೆ. ಇದನ್ನು ಶುಚಿಗೊಳಿಸಿ, ಒಂದೊಳ್ಳೆ ರಂಗೋಲಿ ಹಾಕುವುದು ಇನ್ನೂ ಉತ್ತಮ ಫೀಲ್ ನೀಡುತ್ತದೆ.

ಮನೆಯಲ್ಲಿ ಗಾಳಿ ಬೆಳಕು ಇದೆಯೋ ಇಲ್ಲವೋ ಎಂದು ಜನ ಪರಿಶೀಲಿಸುತ್ತಾರೆ. ಗಾಳಿ ಬೆಳಕು ಇದ್ದಷ್ಟು ಮನೆ ಚೆನ್ನಾಗಿ ಅನಿಸುತ್ತದೆ. ದೊಡ್ಡದಾಗಿಯೂ ಅನಿಸುತ್ತದೆ. ಕರ್ಟನ್‌ಗಳನ್ನು ಸರಿಸಿ, ಕಿಟಕಿಗಳನ್ನು ತೆರೆದು ಇಡಿ. ಫ್ರೆಶ್ ಗಾಳಿಯಿಂದ ಮನಸ್ಸು ಇನ್ನಷ್ಟು ಉಲ್ಲಾಸದಾಯಕವಾಗಿ ಇರುತ್ತದೆ.

ಅಡುಗೆ ಮನೆ ಹಾಲ್‌ನಿಂದ ಕಾಣಿಸುತ್ತದೆ ಎಂದಾದರೆ ಮಿಸ್ ಮಾಡದೇ ಅದನ್ನು ಕ್ಲೀನ್ ಮಾಡಿಕೊಳ್ಳಿ. ಸಿಂಕ್‌ನಲ್ಲಿ ಯಾವುದೇ ಕೊಳೆ ಪಾತ್ರೆ ಬಿದ್ದಿರದಂತೆ ನೋಡಿಕೊಳ್ಳಿ. ಇನ್ನು ಸ್ಟೋವ್ ಸುತ್ತಮುತ್ತ ಊಟ ಬಿದ್ದ ಕರೆ, ಕಟ್ಟೆಯ ಮೇಲೆ ಹತ್ತಾರು ಐಟಂ ಇರುವುದನ್ನು ಅವಾಯ್ಡ್ ಮಾಡಿ. ಇದೆಲ್ಲದರ ಜೊತೆ ಬಂದ ಜನರನ್ನು ನೀವು ಹೇಗೆ ಮಾತನಾಡಿಸುತ್ತೀರಿ, ಅವರ ಜೊತೆ ಆತ್ಮೀಯವಾಗಿ ವರ್ತೀಸುತ್ತೀರೋ ಇಲ್ಲವೋ ಎನ್ನುವುದು ತುಂಬಾ ಮುಖ್ಯವಾಗಿದೆ.




