August 28, 2026
Friday, August 28, 2026
spot_img

ಆಧಾರ್ ಕಾರ್ಡ್ ಬಳಕೆದಾರರೇ ಗಮನಿಸಿ: ಉಚಿತ ಅಪ್​ಡೇಟ್ ಗಡುವು ಮತ್ತೆ 1 ವರ್ಷ ವಿಸ್ತರಣೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಆಧಾರ್ ಕಾರ್ಡ್ ಬಳಕೆದಾರರಿಗೆ ಸಿಹಿ ಸುದ್ದಿಯೊಂದು ಇದ್ದು, ಆನ್‌ಲೈನ್‌ನಲ್ಲಿ ಉಚಿತವಾಗಿ ಆಧಾರ್ ದಾಖಲೆಗಳನ್ನು ನವೀಕರಿಸಲು ನೀಡಲಾಗಿದ್ದ ಕೊನೆಯ ದಿನಾಂಕವನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಮತ್ತೆ ಒಂದು ವರ್ಷದ ಅವಧಿಗೆ ವಿಸ್ತರಿಸಿದೆ.

ಹೀಗಾಗಿ ಆಧಾರ್ ಕಾರ್ಡ್ ಹೊಂದಿರುವ ನಾಗರಿಕರು ಯಾವುದೇ ಶುಲ್ಕವಿಲ್ಲದೆ ಆನ್‌ಲೈನ್‌ನಲ್ಲಿ 2027ರ ಜೂನ್ 14 ರವರೆಗೆ ದಾಖಲೆಗಳನ್ನು ನವೀಕರಿಸಬಹುದಾಗಿದೆ.

ಮೈಆಧಾರ್ ಪೋರ್ಟಲ್ ಮೂಲಕ ಉಚಿತ

ಈ ಕುರಿತು ಮಾಹಿತಿ ನೀಡಿದ ಯುಐಡಿಎಐ, ಮೈಆಧಾರ್ ಪೋರ್ಟಲ್ ಮೂಲಕ ಜನರು ತಮ್ಮ ದಾಖಲೆಗಳನ್ನ ಉಚಿತವಾಗಿ ನವೀಕರಿಸುತ್ತಿದ್ದು, ಇನ್ನೂ ಬಾಕಿ ಇರುವ ಜನರಿಗೆ ಅವಕಾಶ ಕಲ್ಪಿಸಲು ವಿಸ್ತರಣೆ ಮಾಡಲಾಗಿದೆ. ಆಧಾರ್ ಕಾರ್ಡ್ ಪಡೆದು 10 ವರ್ಷಗಳಾಗಿ ಇನ್ನು ದಾಖಲೆಗಳನ್ನು ನವೀಕರಿಸದ ನಾಗರಿಕರು, ತಮ್ಮ ಗುರುತಿನ ದಾಖಲೆ ಮತ್ತು ವಿಳಾಸದ ಮಾಹಿತಿ ಜೊತೆಗೆ ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ.

ಸೇವಾ ಕೇಂದ್ರಗಳಲ್ಲಿಯೂ ಅಪ್‌ಡೇಟ್ ಮಾಡಲು ಅವಕಾಶ

ಆನ್‌ಲೈನ್‌ನಲ್ಲಿ ಮೂಲಕ ಅಪ್‌ಡೇಟ್ ಮಾಡುವವರಿಗೆ ಮಾತ್ರ ಉಚಿತವಾಗಿದ್ದು, ನಾಗರಿಕರು ತಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ದಾಖಲೆಗಳನ್ನು ನವೀಕರಿಸಲು ನಿಯಮಿತ ಸೇವಾ ಶುಲ್ಕವಾದ 75 ರೂ ಅನ್ನು ಪಾವತಿಸಬೇಕು. ಪ್ರತಿಯೊಬ್ಬರೂ ತಮ್ಮ ವಿವರಗಳನ್ನು ನವೀಕರಿಸಿಕೊಳ್ಳುವಂತೆ ಯುಐಡಿಎಐ ಮನವಿ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !