ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆಯೂ ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತೈಲ ಲಭ್ಯವಿದ್ದು, ಒಂದು ವೇಳೆ ಅಮೆರಿಕ ನಿರ್ಬಂಧ ಹೇರಿದರೂ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಮುಂದುವರಿಸಲಿದೆ ಕೇಂದ್ರ ಸರಕಾರ ತಿಳಿಸಿದೆ.
ದೇಶದ ಇಂಧನ ಭದ್ರತೆ ಮುಖ್ಯ
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ಇಂಧನದ ಅಭಾವದಿಂದಾಗಿ ಜಗತ್ತಿನಲ್ಲಿ ಬೆಲೆಗಳು ಏರುತ್ತಿದ್ದು, ಇದರ ನಡುವೆ ದೇಶದ ಇಂಧನ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿ ನಮಗೆ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.
ಆಮದು ನೀತಿಯಲ್ಲಿ ಬದಲಾವಣೆ ಇಲ್ಲ
ರಷ್ಯಾದಿಂದ ತೈಲ ರಫ್ತಿನ ಮೇಲಿನ ಅಮೆರಿಕ ವಿಧಿಸಿದ್ದ ನಿರ್ಬಂಧಗಳ ಕುರಿತು ಪ್ರತಿಕ್ರಿಯಿಸಿದ ಶರ್ಮಾ, ಭಾರತದ ಆಮದು ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಈಗಾಗಲೇ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದ್ದು, ಮುಂದೆಯೂ ಖರೀದಿ ಮುಂದುವರಿಸಿದ್ದೇವೆ ಎಂದು ಹೇಳಿದರು.
ಕಚ್ಚಾ ತೈಲದ ಕೊರತೆಯಿಲ್ಲ
ಇದೆ ವೇಳೆ ದೇಶದಲ್ಲಿ ಇಂಧನ ಲಭ್ಯತೆ ಬಗ್ಗೆ ಯಾವುದೇ ಆತಂಕ ಬೇಡ ಎಂದ ಅವರು, ಯಾವುದೇ ರೀತಿಯಲ್ಲೂ ಕಚ್ಚಾ ತೈಲದ ಕೊರತೆ ಇಲ್ಲ. ಸಾಕಷ್ಟು ಪ್ರಮಾಣದಲ್ಲಿ ತೈಲ ಲಭ್ಯವಿದೆ. ಈ ವಿನಾಯಿತಿಯ ನಿರ್ಬಂಧದ ಕುರಿತು ಆತಂಕ ಬೇಡ ಎಂದು ಭರವಸೆ ನೀಡಿದರು.



