May 18, 2026
Monday, May 18, 2026
spot_img

‘ವೇಗದ ಯುಗಕ್ಕೆ ಭಾರತದ ಎಂಟ್ರಿ’: ದೇಶದ ಮೊದಲ ಬುಲೆಟ್ ರೈಲಿನ ಫಸ್ಟ್ ಲುಕ್ ರಿವೀಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಅತಿವೇಗದ ರೈಲು ಸಂಚಾರದ ಕನಸು ಇದೀಗ ಮತ್ತಷ್ಟು ಹತ್ತಿರವಾಗಿದ್ದು, ದೇಶದ ಮೊದಲ ಬುಲೆಟ್ ರೈಲಿನ ಪ್ರಸ್ತಾವಿತ ಮಾದರಿಯ ಚಿತ್ರವನ್ನು ಕೇಂದ್ರ ರೈಲ್ವೆ ಸಚಿವಾಲಯ ಅನಾವರಣಗೊಳಿಸಿದೆ.

ಜಪಾನ್ ಹಾಗೂ ಚೀನಾದ ಮಾದರಿಯ ಅತ್ಯಾಧುನಿಕ ವೇಗದ ರೈಲು ವ್ಯವಸ್ಥೆ ಈಗ ಭಾರತೀಯ ರೈಲ್ವೆಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡುತ್ತಿದೆ.

ರೈಲ್ವೆ ಸಚಿವಾಲಯದಲ್ಲಿ ವಿಶೇಷ ಪ್ರದರ್ಶನ

ದೆಹಲಿಯ ರೈಲ್ವೆ ಸಚಿವಾಲಯದ ಕಚೇರಿಯ ಗೇಟ್ ಸಂಖ್ಯೆ 4ರಲ್ಲಿ ಬುಲೆಟ್ ರೈಲಿನ ಆಕರ್ಷಕ ಮಾದರಿ ಚಿತ್ರವನ್ನು ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ. ಈ ರೈಲು ಅತ್ಯಾಧುನಿಕ ತಂತ್ರಜ್ಞಾನ, ವೇಗ ಮತ್ತು ಭವಿಷ್ಯದ ಪ್ರಯಾಣ ಸೌಲಭ್ಯಗಳ ಸಂಕೇತವಾಗಿ ಕಾಣಿಸಿಕೊಂಡಿದೆ.

ಇದನ್ನೂ ಓದಿ:

2027ರಲ್ಲಿ ಆರಂಭವಾಗಲಿದೆ ಸೇವೆ

ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಭಾರತದ ಮೊದಲ ಬುಲೆಟ್ ರೈಲು ಸೇವೆ 2027ರ ಆಗಸ್ಟ್ 15ರಿಂದ ಆರಂಭವಾಗುವ ನಿರೀಕ್ಷೆ ಇದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಈ ಯೋಜನೆ ದೇಶದ ವೇಗದ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.

ವೇಗದ ಜೊತೆಗೆ ಹೊಸ ಅನುಭವ

ಬುಲೆಟ್ ರೈಲು ಗಂಟೆಗೆ 300 ಕಿಮೀಗೂ ಹೆಚ್ಚು ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ ಎನ್ನಲಾಗಿದೆ. ಇದರಿಂದ ದೀರ್ಘ ದೂರದ ಪ್ರಯಾಣದ ಸಮಯ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಪ್ರಯಾಣಿಕರಿಗೆ ವಿಮಾನ ಪ್ರಯಾಣದ ಅನುಭವದಂತೆಯೇ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !