June 24, 2026
Wednesday, June 24, 2026
spot_img

‘ಮಸೀದಿ ಫುಲ್ ಆದ್ರೆ ಶಿಫ್ಟ್‌ನಲ್ಲಿ ನಮಾಜ್ ಮಾಡಿ’: ಯೋಗಿ ಖಡಕ್ ವಾರ್ನಿಂಗ್ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಡೆಸುವ ವಿಚಾರವಾಗಿ ಮತ್ತೊಮ್ಮೆ ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ.

ಮಸೀದಿಗಳಲ್ಲಿ ಜಾಗ ಸಾಲದಿದ್ದರೆ ಶಿಫ್ಟ್‌ಗಳಲ್ಲಿ ಪ್ರಾರ್ಥನೆ ನಡೆಸಬೇಕು, ಆದರೆ ಯಾವುದೇ ಕಾರಣಕ್ಕೂ ರಸ್ತೆಗಳನ್ನು ಬಂದ್ ಮಾಡಿ ನಮಾಜ್ ಮಾಡಲು ಅವಕಾಶ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಶಿಫ್ಟ್‌ಗಳಲ್ಲಿ ನಮಾಜ್ ಮಾಡಿ’

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, “ಕೆಲವರು ಮಸೀದಿಯಲ್ಲಿ ಜಾಗ ಸಾಲುವುದಿಲ್ಲ ಎಂದು ಹೇಳುತ್ತಾರೆ. ಅಂಥ ಪರಿಸ್ಥಿತಿ ಇದ್ದರೆ ಬೇರೆ ಬೇರೆ ಪಾಳಿಯಲ್ಲಿ ನಮಾಜ್ ಮಾಡಿ. ಸಾರ್ವಜನಿಕ ರಸ್ತೆಗಳ ಮೇಲೆ ಪ್ರಾರ್ಥನೆ ನಡೆಸುವುದು ಸರಿಯಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಜನಸಂಖ್ಯೆ ನಿಯಂತ್ರಣದ ಮಾತು

ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಳದ ವಿಷಯವನ್ನೂ ಉಲ್ಲೇಖಿಸಿದ ಯೋಗಿ, “ನಿಭಾಯಿಸಲು ಸಾಧ್ಯವಾಗದಷ್ಟು ಜನಸಂಖ್ಯೆ ಏಕೆ ಹೆಚ್ಚಿಸುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ. ಮನೆ ಅಥವಾ ಮಸೀದಿಯಲ್ಲಿ ಜಾಗ ಸಾಲದಿದ್ದರೆ ಮೊದಲು ಜನಸಂಖ್ಯೆ ನಿಯಂತ್ರಣದತ್ತ ಗಮನ ಹರಿಸಬೇಕು ಎಂದರು.

ಕಾನೂನು ಎಲ್ಲರಿಗೂ ಒಂದೇ

ರಸ್ತೆಗಳು ಸಾರ್ವಜನಿಕರ ಬಳಕೆಗೆ ಇರುವುದರಿಂದ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಅವುಗಳನ್ನು ಬಂದ್ ಮಾಡುವುದನ್ನು ಒಪ್ಪಲಾಗುವುದಿಲ್ಲ ಎಂದು ಯೋಗಿ ಹೇಳಿದರು. “ಮೊದಲು ನಿಯಮಗಳನ್ನು ಪ್ರೀತಿಯಿಂದ ತಿಳಿಸುತ್ತೇವೆ. ಅದನ್ನು ಪಾಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !