ಮಧ್ಯಪ್ರದೇಶದಲ್ಲಿ ಕಲ್ಲಂಗಡಿ ಹಣ್ಣು ತಿಂದ ತಕ್ಷಣ ತಂದೆ ಸಾವು ಮತ್ತು ಮಗ ಗಂಭೀರ ಸ್ಥಿತಿ ತಲುಪಿರುವ ಭೀಕರ ದುರಂತವು, ನಾವು ದಿನನಿತ್ಯ ತಿನ್ನುವ ಹಣ್ಣುಗಳ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಮೂಡಿಸಿದೆ. ಮಾರುಕಟ್ಟೆಯಲ್ಲಿ ಬೇಗ ಲಾಭ ಗಳಿಸಲು ಹಣ್ಣುಗಳನ್ನು ಕೃತಕವಾಗಿ ಹಣ್ಣು ಮಾಡುವುದು ಮತ್ತು ರಾಸಾಯನಿಕ ಇಂಜೆಕ್ಷನ್‌ಗಳನ್ನು ನೀಡುವುದು ಹೆಚ್ಚಾಗುತ್ತಿದ್ದು, ಇದು ಜನರ ಜೀವಕ್ಕೆ ಕಂಟಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ, ನಾವು ಕೊಳ್ಳುವ ಕಲ್ಲಂಗಡಿ ಹಣ್ಣು ನೈಸರ್ಗಿಕವಾಗಿದೆಯೇ ಅಥವಾ ಕೃತಕ ರಾಸಾಯನಿಕಯುಕ್ತವಾಗಿದೆಯೇ ಎಂದು ಗುರುತಿಸುವುದು ಹೇಗೆ ಎಂಬುದನ್ನು ತಿಳಿಯಬೇಕು.
ನೈಸರ್ಗಿಕ ಕಲ್ಲಂಗಡಿ ಹಣ್ಣಿಗೂ ಕೃತಕ ಕಲ್ಲಂಗಡಿ ಹಣ್ಣಿಗೂ ಇರುವ ವ್ಯತ್ಯಾಸ:
ನೈಸರ್ಗಿಕ ಕಲ್ಲಂಗಡಿ ಹಣ್ಣು ಕೆಂಪು ಅಥವಾ ಗುಲಾಬಿ ಬಣ್ಣ ಇರುತ್ತದೆ. ಬಣ್ಣವು ಎಲ್ಲೂ ಅತಿಯಾಗಿ ಮಿನುಗುವುದಿಲ್ಲ. ಕೃತಕ ಹಣ್ಣು ಅತಿಯಾದ ಗಾಢ ಕೆಂಪು ಬಣ್ಣವಿರುತ್ತದೆ.
ನೈಸರ್ಗಿಕ ಹಣ್ಣಿನ ಬೀಜಗಳು ಸಂಪೂರ್ಣವಾಗಿ ಬೆಳೆದು ಕಪ್ಪು ಅಥವಾ ಕಡು ಕಂದು ಬಣ್ಣದಲ್ಲಿರುತ್ತವೆ. ಆದರೆ ಕೃತಕ ಹಣ್ಣು ಒಳಗಡೆ ತುಂಬಾ ಕೆಂಪಗಿದ್ದರೂ, ಬೀಜಗಳು ಮಾತ್ರ ಬಿಳಿ ಅಥವಾ ಸರಿಯಾಗಿ ಬೆಳೆಯದೆ ಇರುತ್ತವೆ.
ಹಣ್ಣಿನ ಹೊರಭಾಗದಲ್ಲಿ ತಿಳಿ ಹಳದಿ ಅಥವಾ ಕ್ರೀಮ್ ಬಣ್ಣದ ದೊಡ್ಡ ಕಲೆ ಇರುತ್ತದೆ (ಇದು ಹಣ್ಣು ನೆಲದ ಮೇಲೆ ನೈಸರ್ಗಿಕವಾಗಿ ಬೆಳೆದಿದೆ ಎಂಬುದರ ಗುರುತಾಗಿರುತ್ತದೆ. ಆದರೆ ಕೃತಕ ಹಣ್ಣಿನಲ್ಲಿ ಇಡೀ ಹಣ್ಣು ಒಂದೇ ತರ ಹಸಿರಾಗಿದ್ದು,ಹಳದಿ ಕಲೆ ಇರುವುದಿಲ್ಲ.
ನೈಸರ್ಗಿಕ ಹಣ್ಣು ಹದವಾದ ಸಿಹಿ ಮತ್ತು ನೈಸರ್ಗಿಕ ಸುವಾಸನೆ ಹೊಂದಿರುತ್ತದೆ. ಆದರೆ ಕೃತಕ ಹಣ್ಣು ಅತಿಯಾದ ಅಥವಾ ಅಸಹಜವಾದ ಸಿಹಿ ಇರುತ್ತದೆ. ಕೆಲವು ಭಾಗಗಳು ಮಾತ್ರ ಅತಿಯಾಗಿ ಮೆತ್ತಗಾಗಿರುತ್ತವೆ.
ನೈಸರ್ಗಿಕ ಹಣ್ಣಿನ ತೊಟ್ಟು ಒಣಗಿ ಕಂದು ಬಣ್ನಕ್ಕೆ ತಿರುಗಿರುತ್ತದೆ. ಕೂತಕ ಹಣ್ನುಗಳನ್ನು ಬೇಗ ಕೊಯ್ಲು ಮಾಡಿದ್ದರಿಂದ ತೊಟ್ಟು ಹಸಿರಾಗಿಯೇ ಇರುತ್ತದೆ.



