May 19, 2026
Tuesday, May 19, 2026
spot_img

ನಟ ದರ್ಶನ್ ಭೇಟಿಗೆ ಜೈಲಿಗೆ ಆಗಮಿಸಿದ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರಿಗೆ ಇಂದು ಜೈಲಾಧಿಕಾರಿಗಳಿಂದ ರಿಲೀಫ್ ಸಿಕ್ಕಿದ್ದು, ಜೈಲಿನಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಅವರನ್ನು ಮುಖಾಮುಖಿಯಾಗಿ ಭೇಟಿಯಾಗಲು ಅನುಮತಿ ನೀಡಿದ್ದಾರೆ.

ಈ ಹಿನ್ನೆಲೆ ವಿವಾಹ ವಾರ್ಷಿಕೋತ್ಸವದ ದಿನವಾದ ಇಂದು ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನಿಶ್ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.

ಮಗನ ಕಂಡು ದರ್ಶನ್ ಭಾವುಕ

ಎಂಟು ತಿಂಗಳ ಬಳಿಕ ಇದು ಮೊದಲ ಮುಖಾಮುಖಿ ಭೇಟಿಯಾದ್ದು, ಪತ್ನಿ ಹಾಗೂ ಮಗನ ಕಂಡು ದರ್ಶನ್ ಭಾವುಕರಾಗಿದ್ದಾರೆ. ಇತ್ತ ನಟ ದರ್ಶನ್ ನೇರ ಭೇಟಿಗೆ ತೆರಳಿದ ವಿಜಯಲಕ್ಷ್ಮಿ ಮತ್ತು ವಿನೀಶ್ ಅವರ ಜೊತೆ ಮ್ಯಾನೇಜರ್ ನಾಗರಾಜ್ ಕೂಡ ಆಗಮಿಸಿದ್ದಾರೆ.

ಕೇವಲ ಹಣ್ಣುಗಳು ತರಲು ಅವಕಾಶ

ವಿವಾಹ ವಾರ್ಷಿಕೋತ್ಸವದ ದಿನವಾದರೂ ಜೈಲು ಭೇಟಿಯ ವೇಳೆ ಉಡುಗೊರೆ ತರಲು ಅನುಮತಿ ಇಲ್ಲದ ಕಾರಣ ವಿಜಯಲಕ್ಷ್ಮಿ ಕೇವಲ ಹಣ್ಣುಗಳನ್ನು ಮಾತ್ರ ತೆಗೆದುಕೊಂಡು ಬಂದಿದ್ದಾರೆ.

ಮೇ 15ರಂದು ದರ್ಶನ್ ಪರಪ್ಪನ ಅಗ್ರಹಾರ ಕಾರಾಗೃಹದ ಎಸ್‌ಪಿಗೆ ಪತ್ನಿ,ಮಗನ ಭೇಟಿಗೆ ಅನುಮತಿಗಾಗಿ ಪತ್ರ ಬರೆದಿದ್ದರು. ಮೇ 16ರಂದು ಡಿಜಿಪಿ ಅಲೋಕ್ ಕುಮಾರ್ ಅವರನ್ನು ವಿಜಯಲಕ್ಷ್ಮಿ ಭೇಟಿ ಮಾಡಿ ಮನವಿ ಮಾಡಿದ್ದರು . ಮನವಿಗೆ ಸ್ಪಂದಿಸಿದ ಜೈಲು ಅಧಿಕಾರಿಗಳು, ಒಳ ಸಂದರ್ಶನಕ್ಕೆ ಅವಕಾಶ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !