June 14, 2026
Sunday, June 14, 2026
spot_img

‘ನನ್ನ ಜಾತಿ ಯಾವುದು ಗೊತ್ತಾ?’: ವೇದಿಕೆಯಲ್ಲಿ ನಿತಿನ್ ಗಡ್ಕರಿಗೆ ನಾನಾ ಪಾಟೇಕರ್ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಮತ್ತೊಮ್ಮೆ ತಮ್ಮ ನೇರ ಮಾತಿನ ಮೂಲಕ ಸುದ್ದಿಯಾಗಿದ್ದಾರೆ.

ನಾಗ್ಪುರದಲ್ಲಿ ನಡೆದ ‘ಜಲಕ್ರಾಂತಿ’ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಹೆಚ್ಚುತ್ತಿರುವ ಜಾತಿ ರಾಜಕಾರಣದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ವೇದಿಕೆಯಲ್ಲಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ನೇರ ಪ್ರಶ್ನೆ ಕೇಳಿ ಎಲ್ಲರ ಗಮನ ಸೆಳೆದರು.

‘ಮಾನವೀಯತೆಯೇ ನನ್ನ ಧರ್ಮ’

ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ನಾನಾ ಪಾಟೇಕರ್, ನಾನು ಎಂದಿಗೂ ನನ್ನ ಜಾತಿಯನ್ನು ಹೇಳಿಕೊಂಡಿಲ್ಲ. ನನ್ನ ತಾಯಿ ‘ಮಾನವ ಜನ್ಮವೇ ನಿನ್ನ ಜಾತಿ, ಮಾನವೀಯತೆಯೇ ನಿನ್ನ ಧರ್ಮ’ ಎಂದು ಕಲಿಸಿದ್ದರು ಎಂದು ಹೇಳಿದರು. ಜಾತಿ ವ್ಯವಸ್ಥೆ ಶಿಕ್ಷಣ ಮತ್ತು ಅರಿವಿನಿಂದ ಮಾತ್ರ ಕೊನೆಗೊಳ್ಳಬಹುದು ಎಂದರು.

ಇದನ್ನೂ ಓದಿ:

ಜಾತಿ ರಾಜಕಾರಣದ ವಿರುದ್ಧ ಕಿಡಿ

ಇಂದಿನ ಸಮಾಜದಲ್ಲಿ ವ್ಯಕ್ತಿಯ ಗುಣಕ್ಕಿಂತ ಜಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. “ನಾವೆಲ್ಲರೂ ಮನುಷ್ಯರಾಗಿ ಒಂದಾದಾಗ ಮಾತ್ರ ಜಾತಿವಾದದ ಗೋಡೆ ಕುಸಿಯುತ್ತದೆ” ಎಂದು ಕಟುವಾಗಿ ಹೇಳಿದರು.

ಗಡ್ಕರಿ ಹಾಗೂ ಸಮಾಜಸೇವೆಗೆ ಮೆಚ್ಚುಗೆ

ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿಯನ್ನು ಅಜಾತಶತ್ರು ಎಂದು ಹೊಗಳಿದ ನಾನಾ, ನೀರಿನ ಸಂರಕ್ಷಣೆಗೆ ಕೆಲಸ ಮಾಡುತ್ತಿರುವ ಸಂಸ್ಥೆಗಳ ಸೇವೆಯನ್ನೂ ಶ್ಲಾಘಿಸಿದರು. ಇದೇ ವೇಳೆ ಚಿತ್ರರಂಗದಿಂದ ನಿವೃತ್ತಿಯಾಗುವುದಾಗಿ ಹೇಳಿದ್ದ ಅವರ ಮಾತುಗಳು ಮತ್ತೆ ಚರ್ಚೆಗೆ ಗ್ರಾಸವಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !