May 19, 2026
Tuesday, May 19, 2026
spot_img

ನ್ಯಾ. ಯಶವಂತ್ ವರ್ಮಾ ಮನೆಯಲ್ಲಿ ನಗದು ಪತ್ತೆ ಕೇಸ್: ಸ್ಪೀಕರ್ ಓಂ ಬಿರ್ಲಾಗೆ ವರದಿ ಸಲ್ಲಿಸಿದ ವಿಚಾರಣಾ ಸಮಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಹೈಕೋರ್ಟ್ ನ್ಯಾಯಧೀಶರಾಗಿದ್ದ ಯಶವಂತ್ ವರ್ಮಾ ಅವರ ಮನೆಯಲ್ಲಿ ಕೋಟ್ಯಂತರ ರೂಪಾಯಿ ನಗದು ನೋಟು ದೊರೆತ ಪ್ರಕರಣ ಸಂಬಂಧ ಅವರ ತನಿಖೆ ನಡೆಸುತ್ತಿರುವ ಸಂಸತ್ತು ತನಿಖಾ ಸಮಿತಿಯು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ತನ್ನ ವರದಿ ಸಲ್ಲಿಸಿದೆ.

ಮಳೆಗಾಲದ ಅಧಿವೇಶನದಲ್ಲಿ ವರದಿ ಮಂಡನೆ

ಈ ಕುರಿತು ಮಾಹಿತಿ ನೀಡಿರುವ ಲೋಕಸಭಾ ಸಚಿವಾಲಯ, ನ್ಯಾಯಾಧೀಶರ (ವಿಚಾರಣಾ)ಕಾಯ್ದೆ 1968ರ ನಿಬಂಧನೆಗಳ ಅಡಿಯಲ್ಲಿ ತನಿಖಾ ಸಮಿತಿಯೂ ವರದಿಯನ್ನು ಸಲ್ಲಿಸಿದೆ. ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ತನಿಖಾ ವರದಿಯನ್ನು ಮಂಡಿಸಲಾಗುವುದು ಎಂದು ತಿಳಿಸಿದೆ.

ನ್ಯಾ. ಯಶವಂತ್ ವರ್ಮಾ ವಿರುದ್ಧ ಭ್ರಷ್ಟಾಚಾರ ಆರೋಪ

ನ್ಯಾ. ಯಶವಂತ್ ವರ್ಮಾ ಅವರ ಸರ್ಕಾರಿ ನಿವಾಸದಲ್ಲಿ 2025ರ ಮಾರ್ಚ್ 14ರ ರಾತ್ರಿ ಬೆಂಕಿ ದುರಂತ ಸಂಭವಿಸಿದ್ದು, ಈ ವೇಳೆ ದೊಡ್ಡ ಪ್ರಮಾಣದಲ್ಲಿ ಸುಟ್ಟ ಹಣದ ನೋಟುಗಳನ್ನು ಪತ್ತೆಯಾಗಿತ್ತು. ಈ ಬೆನ್ನಲ್ಲೇ ಹಣವನ್ನು ಭ್ರಷ್ಟಾಚಾರ ಮೂಲಕ ಗಳಿಸಲಾಗಿದೆ ಎಂದು ಆರೋಪಿಸಿ, ವರ್ಮಾ ಅವರನ್ನು ನ್ಯಾಯಮೂರ್ತಿ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹ ಕೇಳಿಬಂದಿತ್ತು.

200ಕ್ಕೂ ಹೆಚ್ಚು ಲೋಕಸಭೆ ಸಂಸದರು ನ್ಯಾ.ವರ್ಮಾ ಅವರನ್ನು ಪದಚ್ಯುತಗೊಳಿಸಲು ಮಹಾಭೀಯೋಗ ನಡೆಸುವಂತೆ ಕೋರಿ ಸ್ಪೀಕರ್ ಓಂ ಬಿರ್ಮಾ ಅವರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆ ಸ್ಪೀಕರ್ ಬಿರ್ಲಾ ಅವರು ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !