October 16, 2026
Friday, October 16, 2026
spot_img

‘ಸಮುದ್ರ ಮಧ್ಯೆ ಅಮೆರಿಕದ ಅಟ್ಟಹಾಸ’: ಇರಾನ್ ತೈಲ ಟ್ಯಾಂಕರ್ ವಶ, ಉದ್ವಿಗ್ನತೆ ಮತ್ತಷ್ಟು ತೀವ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆ, ಹಿಂದೂ ಮಹಾಸಾಗರದಲ್ಲಿ ಇರಾನ್‌ಗೆ ಸೇರಿದ ತೈಲ ಟ್ಯಾಂಕರ್ ಅನ್ನು ಅಮೆರಿಕ ವಶಪಡಿಸಿಕೊಂಡಿರುವ ಘಟನೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಅಮೆರಿಕದ ಅಧಿಕಾರಿಗಳ ಮಾಹಿತಿಯಂತೆ, ‘ಸ್ಕೈವೇವ್’ ಹೆಸರಿನ ಹಡಗು ಇರಾನ್ ಮೂಲದ ಕಚ್ಚಾ ತೈಲ ಸಾಗಿಸುತ್ತಿತ್ತು ಎಂದು ಶಂಕಿಸಲಾಗಿದೆ.

ಒಂದು ಮಿಲಿಯನ್ ಬ್ಯಾರೆಲ್ ತೈಲ ಸಾಗಣೆ ಶಂಕೆ

ಗುಪ್ತಚರ ವರದಿಗಳ ಪ್ರಕಾರ, ಈ ಟ್ಯಾಂಕರ್ ಫೆಬ್ರವರಿಯಲ್ಲಿ ಇರಾನ್‌ನ ಖಾರ್ಗ್ ದ್ವೀಪದಿಂದ ಒಂದು ಮಿಲಿಯನ್ ಬ್ಯಾರೆಲ್‌ಗಿಂತ ಹೆಚ್ಚು ಕಚ್ಚಾ ತೈಲವನ್ನು ತುಂಬಿಕೊಂಡಿರಬಹುದು ಎನ್ನಲಾಗಿದೆ. ಇತ್ತೀಚೆಗೆ ಮಲಾಕ್ಕಾ ಜಲಸಂಧಿ ದಾಟಿದ ಬಳಿಕ ಹಡಗು ಮಲೇಷ್ಯಾ ಸಮುದ್ರ ಭಾಗದತ್ತ ಚಲಿಸುತ್ತಿತ್ತು.

ಇದನ್ನೂ ಓದಿ:

‘ಶ್ಯಾಡೋ ಫ್ಲೀಟ್’ ಜಾಲದ ಅನುಮಾನ

ಅಮೆರಿಕದ ಅಧಿಕಾರಿಗಳು, ಈ ಹಡಗು ರಹಸ್ಯ ತೈಲ ವರ್ಗಾವಣೆಯಲ್ಲಿ ಭಾಗಿಯಾಗಿತ್ತು ಎಂದು ಆರೋಪಿಸಿದ್ದಾರೆ. ನಿರ್ಬಂಧಿತ ತೈಲ ಸಾಗಣೆಯ ಮೂಲ ಮರೆಮಾಚಲು ಬಳಸುವ ‘ಶ್ಯಾಡೋ ಫ್ಲೀಟ್’ ತಂತ್ರದಲ್ಲಿ ಈ ಟ್ಯಾಂಕರ್ ಕಾರ್ಯನಿರ್ವಹಿಸುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ.

ಹಿಂದೆಯೂ ನಡೆದಿದ್ದ ಕಾರ್ಯಾಚರಣೆ

ಇದೇ ಮಾದರಿಯಲ್ಲಿ ಏಪ್ರಿಲ್ ತಿಂಗಳಲ್ಲೂ ಅಮೆರಿಕ ‘ಮೆಜೆಸ್ಟಿಕ್ ಎಕ್ಸ್’ ಹಾಗೂ ‘ಟಿಫಾನಿ’ ಹೆಸರಿನ ಎರಡು ತೈಲ ಹಡಗುಗಳನ್ನು ವಶಪಡಿಸಿತ್ತು. ಇತ್ತೀಚಿನ ಕ್ರಮದಿಂದ ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಉದ್ವಿಗ್ನತೆ ಹೆಚ್ಚುವ ಸಾಧ್ಯತೆ ಇದೆ.

Must Read