June 11, 2026
Thursday, June 11, 2026
spot_img

ಡ್ರಗ್ ಜಾಲಕ್ಕೆ ಬೆಚ್ಚಿದ ಬೆಂಗಳೂರು: 35 ಕೋಟಿ ರೂ ಮೌಲ್ಯದ MDMA ವಶ, ಎಂಟು ಜನ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದಲ್ಲಿ ಮತ್ತೆ ಭಾರೀ ಡ್ರಗ್ ದಂಧೆ ಬಯಲಾಗಿದ್ದು, ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.

ಈ ಪ್ರಕರಣದಲ್ಲಿ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದ್ದು, 35 ಕೋಟಿ ಮೌಲ್ಯದ 17.5 ಕೆಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.

ಹೆಬ್ಬಾಳ ಪೊಲೀಸರ ಭರ್ಜರಿ ಕಾರ್ಯಾಚರಣೆ

ಮೇ 11ರಂದು ಸಿಕ್ಕ ಖಚಿತ ಮಾಹಿತಿ ಆಧರಿಸಿ ಹೆಬ್ಬಾಳ ಪೊಲೀಸರು ಆನಂದನಗರ ಭಾಗದಲ್ಲಿ ದಾಳಿ ನಡೆಸಿದರು. ಈ ವೇಳೆ ಮಹಿಳೆ ಸೇರಿ ಮೂವರನ್ನು ಬಂಧಿಸಲಾಯಿತು. ಆರೋಪಿಗಳಿಂದ 4.18 ಕೆಜಿ ಎಂಡಿಎಂಎ, ಎರಡು ಕಾರುಗಳು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:

ದೆಹಲಿ-ಹರಿಯಾಣ ಸಂಪರ್ಕ ಬಯಲು

ವಿಚಾರಣೆ ವೇಳೆ ಆರೋಪಿಗಳು ದೆಹಲಿಯಿಂದ ಕಡಿಮೆ ದರಕ್ಕೆ ಡ್ರಗ್ಸ್ ತಂದು ಬೆಂಗಳೂರಿನಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ವಿಚಾರ ಬಹಿರಂಗವಾಯಿತು. ಬಳಿಕ ಚಿಕ್ಕನಾಯಕನಹಳ್ಳಿಯ ಮನೆಯಲ್ಲಿ ಮತ್ತಷ್ಟು 10.12 ಕೆಜಿ ಎಂಡಿಎಂಎ ಪತ್ತೆಯಾಯಿತು. ಹರಿಯಾಣ ಮತ್ತು ದೆಹಲಿಯಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನೂ ತಲೆಮರೆಸಿಕೊಂಡವರ ಶೋಧ

ಪ್ರಕರಣದ ತನಿಖೆ ಮುಂದುವರಿದಿದ್ದು, ಮತ್ತೊಬ್ಬ ಆರೋಪಿಯನ್ನು ಹೆಣ್ಣೂರು ಭಾಗದಲ್ಲಿ ಬಂಧಿಸಿ 3.2 ಕೆಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಡ್ರಗ್ ಜಾಲದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !