August 29, 2026
Saturday, August 29, 2026
spot_img

ಮೊಬೈಲ್‌ ಚಾರ್ಜ್‌ ಹಾಕುವ ವಿಚಾರಕ್ಕೆ ಜಗಳ: ಕಬ್ಬಿಣದ ರಾಡ್‌ನಿಂದ ಭೀಕರ ಹ*ತ್ಯೆ

ಹೊಸದಿಗಂತ ವರದಿ ಹುಬ್ಬಳ್ಳಿ:

ಮೊಬೈಲ್ ಫೋನ್ ಗೆ ಚಾಜ್೯ ಹಾಕುವ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ಹೋಗಿ ಅಳಿಯ ಮಾವನಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ಬುಧವಾರ ತಡರಾತ್ರಿ ತಾಲೂಕಿ ರೇವಡಿಹಾಳ ಗ್ರಾಮದಲ್ಲಿ ನಡೆದಿದೆ.

ಛಬ್ಬಿ ಗ್ರಾಮದ ದಾದಾಪೀರ ಕೋಲಕಾರ (೩೫) ಎಂಬುವರು ಹತ್ಯೆಯಾಗಿದ್ದು, ಅಳಿಯ ಅಜೀಮ್ ಜಮಖಾನೆ ಎಂಬಾತ ಕೊಲೆ ಮಾಡಿದ್ದಾನೆ.

ಅಳಿಯ ಅಜೀಮ್ ರೆವಡಿಹಾಳದಲ್ಲಿರುವ ಮಾವನ ಮನೆಗೆ ಕೆಲಸ ವಿಚಾರಕ್ಕೆ ಹೋಗಿದ್ದಾನೆ. ಆಗ ಮೊಬೈಲ್ ಫೋನಗೆ ಜಾಚ್೯ ಹಾಕುವ ವಿಚಾರಕ್ಕೆ ಜಗಳ ಆರಂಭವಾಗಿದೆ. ಮಾತಿ ಮಾತಿಗೆ ಬೆಳೆದು ಹಣಕಾಸಿನ ವಿಚಾರಕ್ಕೆ ಜಗಳ ವಿಕೋಪಕ್ಕೆ ಹೋಗಿದೆ. ಆಗ ಅಜೀಮ್ ಕುಡಿದ ಮತ್ತಿನಲ್ಲಿ ಕಬ್ಬಿಣ ರಾಡ್ ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಮಾವ ದಾದಾಪೀರ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು, ಅವನೊಂದಿಗೆ ಅಳಿಯ ಕೆಲಸಕ್ಕೆ ಬರುತ್ತಿದ್ದ. ಈ ವೇಳೆ ಅಳಿಯನಿಗೆ ಮುಂಚಿತವಾಗಿ ಹಣ ನೀಡಿದ್ದಾನೆ. ಇದೇ ವಿಚಾರಕ್ಕೆ ಜಗಳ ವಿಕೋಪಕ್ಕೆ ಹೋಗಿ ಕೊಲೆ ಮಾಡಿದ್ದಾನೆ ಎಂದು ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣದಲ್ಲಿ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !