ಜೀವನದಲ್ಲಿ ಎಲ್ಲವೂ ಕಾಂಪಿಟೇಷನ್ ಅಲ್ಲ, ರೇಸ್ ಅಲ್ಲ! ಈ ಓಟದಿಂದ ಹೊರಬಂದು ನೋಡಿದ್ರೆ ಮಾತ್ರ ನಿಜವಾದ ಜೀವನ ಏನು, ನಾನ್ಯಾರು, ನನ್ನ ಇತಿ ಮಿತಿಗಳೇನು, ನಾನು ಯಾರನ್ನು ಸೋಲಿಸಬೇಕು ಎನ್ನೋದು ಅರ್ಥವಾಗುತ್ತದೆ.
ಎಲ್ಲವೂ ಸ್ಪರ್ಧೆ ಅಲ್ಲ ಎಂದು ನಿರ್ಧರಿಸೋಕೆ ಒಂದು ಕ್ಷಣ ಸಾಕು, ಅದಾದ ನಂತರ ಎಲ್ಲವೂ ತಂತಾನೇ ಲೈನ್‌ಗೆ ಬರುತ್ತದೆ. ನೀವು ತಾಳ್ಮೆಯಿಂದ ಕಾಯಬೇಕು, ನಿಮ್ಮಲ್ಲಿ ಆ ಕ್ಷಮತೆ ಬರಬೇಕು. ಈ ಮೈಂಡ್‌ಸೆಟ್‌ಗಾಗಿ ಏನೆಲ್ಲಾ ಮಾಡಬೇಕು?
ನಿಮ್ಮೊಳಗೇ ಒಂದು ಟ್ರಾಕ್ ಮಾಡಿಕೊಳ್ಳಿ. ಜಿಮ್‌ನಲ್ಲಿ ಅವರು ಇಪ್ಪತ್ತು ನಿಮಿಷ ಓಡ್ತಿದ್ದಾರೆ ಅಂತ ನೀವೂ ಇಪ್ಪತ್ತು ನಿಮಿಷ ಓಡಬೇಕಿಲ್ಲ. ನಿಮ್ಮ ಲಿಮಿಟ್ ಐದು ನಿಮಿಷ ಇದ್ರೆ ಮರುದಿನ ಆರು ನಿಮಿಷ ಮಾಡಿ, ಅದರ ಮುಂದಿನ ದಿನ ಏಳು, ಹೀಗೆ ನಿಮ್ಮಲ್ಲೇ ನೀವು ಚಾಲೆಂಜ್ ಮಾಡಿಕೊಳ್ಳಿ.
ಬೇರೆಯವರ ಗೆಲುವಿಗೆ ಹೊಟ್ಟೆ ಉರಿ ಬೇಡ. ಅವರ ಪೊಟೆಂಶಿಯಲ್‌ನಷ್ಟು ಗೆಲುವು ಅವರಿಗೆ ಸಿಕ್ಕಿದೆ. ನಿಮ್ಮ ಪೊಟೆಂಶಿಯಲ್‌ನಷ್ಟು ನೀವು ಮಾಡಿದ್ದೀರಿ. ಇದನ್ನು ಅರ್ಥ ಮಾಡಿಕೊಳ್ಳಿ.
ನೀವು ಈಗಿರುವ ಸ್ಥಾನಕ್ಕೆ, ಮಾಡುತ್ತಿರುವ ಕೆಲಸಕ್ಕೆ ಆಭಾರಿಯಾಗಿರಿ. ನೀವು ತಲುಪಿರುವ ಹಂತಕ್ಕೆ ಧನ್ಯವಾದ ಹೇಳಿ.
ಒಂದು ಬೆಂಚ್ ಮಾರ್ಕ್ ಸೆಟ್ ಮಾಡಿಕೊಳ್ಳಿ. ಆ ಗೋಲ್ ಇಷ್ಟು ಸಮಯದಲ್ಲಿ ಮುಗಿಸುತ್ತೇನೆ ಎಂದು ಗುರಿ ಇಟ್ಟುಕೊಳ್ಳಿ. ಈ ಓಟದಲ್ಲಿ ಅಕ್ಕಪಕ್ಕದವರನ್ನು ನೋಡಬೇಡಿ.



