May 22, 2026
Friday, May 22, 2026
spot_img

ತ್ರಿಮೂರ್ತಿಗಳ ಬ್ಯಾಟಿಂಗ್ ಅಬ್ಬರ: ಆರ್​ಸಿಬಿ ಗೆಲುವಿಗೆ ಬಿಗ್ ಟಾರ್ಗೆಟ್ ನೀಡಿದ ಹೈದರಾಬಾದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಭಿಷೇಕ್ ಶರ್ಮಾ, ಹೆನ್ರಿಕ್ ಕ್ಲಾಸೆನ್,ಶಾನ್ ಕಿಶನ್ ಬ್ಯಾಟಿಂಗ್ ಅಬ್ಬರಕ್ಕೆ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 255 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಬೆಂಗಳೂರು ಗೆಲುವಿಗೆ ಬಿಗ್ ಟಾರ್ಗೆಟ್ ನೀಡಿದೆ.

ಅಭಿಷೇಕ್ ಭರ್ಜರಿ ಬ್ಯಾಟಿಂಗ್

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಹೈದರಾಬಾದ್ ತಂಡ ಸ್ಫೋಟಕ ಆರಂಭ ಪಡೆದುಕೊಂಡಿತು. ಟ್ರಾವಿಸ್​ ಹೆಡ್ 16 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 26 ರನ್​ಗಳಿಸಿ ರಸಿಕ್ ಸಲಾಮ್​ ಬೌಲಿಂಗ್​​ನಲ್ಲಿ ಬೌಲ್ಡ್ ಆದರು.ಬಳಿಕ ಇಶಾನ್ ಕಿಶನ್​ 2ನೇ ವಿಕೆಟ್ ಜೊತೆಯಾಟದಲ್ಲಿ 52 ರನ್​ಗಳಿಸಿದರು. ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರಗಳ ಸಹಿತ 56 ರನ್​​ಗಳಿಸಿ ಸುಯಾಶ್ ಶರ್ಮಾಗೆ ವಿಕೆಟ್ ಒಪ್ಪಿಸಿದರು.

ಕ್ಲಾಸೆನ್ ಆಟಕ್ಕೆ ಎಡವಿದ ಬೌಲರ್ಸ್

ಅಭಿಷೇಕ್ ನಂತರ ಹೆನ್ರಿಕ್ ಕ್ಲಾಸೆನ್ 3ನೇ ವಿಕೆಟ್ ಜೊತೆಯಾಟದಲ್ಲಿ ಇಶಾನ್ ಕಿಶನ್ ಜೊತೆ ಸೇರಿ 113 ರನ್​ಗಳ ಬೃಹತ್ ಜೊತೆಯಾಟ ನೀಡಿದರು. ಕ್ಲಾಸೆನ್ 24 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್​ಗಳ ಸಹಿತ 51 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. 5ನೇ ಕ್ರಮಾಂಕದಲ್ಲಿ ಬಂದ ನಿತೀಶ್ ಕುಮಾರ್ ರೆಡ್ಡಿ 4ನೇ ವಿಕೆಟ್​​ಗೆ ಇಶಾನ್ ಜೊತೆಗೂಡಿ 22 ಎಸೆತಗಳಲ್ಲಿ 45 ರನ್​ ಸೇರಿಸಿದರು. ರೆಡ್ಡಿ ಕೇವಲ 12 ಎಸೆತಗಳಲ್ಲಿ 29 ರನ್​ಗಳಿಸಿದರೆ, ಇಶಾನ್ ಕಿಶನ್ 46 ಎಸೆತಗಳಲ್ಲಿ 79 ರನ್​ಗಳಿಸಿ ತಂಡದ ಮೊತ್ತವನ್ನ 250ರ ಗಡಿ ದಾಟಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !