May 23, 2026
Saturday, May 23, 2026
spot_img

ನಿಮ್ಮ ಮಗುವಿಗೆ ಇನ್ನೂ ಮಾತು ಬಂದಿಲ್ಲವೇ? ಪೋಷಕರೇ, ಈ 5 ಪ್ರಮುಖ ಕಾರಣಗಳನ್ನು ತಿಳಿದುಕೊಳ್ಳಿ!

ಮನೆಯಲ್ಲಿ ಮಗುವಿನ ಮುದ್ದು ಮಾತುಗಳನ್ನು ಕೇಳುವುದೇ ಪೋಷಕರಿಗೆ ಒಂದು ಪರಮಾನಂದ. ಸಾಮಾನ್ಯವಾಗಿ ಮಕ್ಕಳು ಒಂದು ವರ್ಷ ತುಂಬುತ್ತಿದ್ದಂತೆ ಸಣ್ಣ ಸಣ್ಣ ಪದಗಳನ್ನು ಆಡಲು ಆರಂಭಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಪೋಷಕರನ್ನು ಕಾಡುತ್ತಿರುವ ದೊಡ್ಡ ಚಿಂತೆಯೆಂದರೆ, ಎರಡು ಅಥವಾ ಮೂರು ವರ್ಷ ದಾಟಿದರೂ ಮಕ್ಕಳಲ್ಲಿ ಮಾತು ಬಾರದಿರುವುದು ಅಥವಾ ಮಾತು ವಿಳಂಬವಾಗುವುದು. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯೇ ಅಥವಾ ಇದರ ಹಿಂದೆ ಬೇರೆ ಏನಾದರೂ ಕಾರಣಗಳಿವೆಯೇ ಎಂದು ಪೋಷಕರು ಆತಂಕಕ್ಕೆ ಒಳಗಾಗುವುದು ಸಹಜ. ಹಾಗಿದ್ದರೆ, ಇಂದಿನ ತಲೆಮಾರಿನ ಮಕ್ಕಳಲ್ಲಿ ಬೇಗ ಮಾತು ಬಾರದಿರಲು ಮುಖ್ಯ ಕಾರಣಗಳೇನು ಮತ್ತು ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಹೇಗೆ ಎಂಬುದರ ಬಗ್ಗೆ ತಿಳಿಯೋಣ.

ಮಕ್ಕಳಿಗೆ ಬೇಗ ಮಾತು ಬಾರದಿರಲು ಕಾರಣಗಳು:
ಇಂದಿನ ದಿನಗಳಲ್ಲಿ ಮಕ್ಕಳಿಗೆ ಬೇಗ ಮಾತು ಬಾರದಿರಲು ಇದು ಅತ್ಯಂತ ಪ್ರಮುಖ ಕಾರಣವಾಗಿದೆ. ಮಕ್ಕಳು ಮೊಬೈಲ್‌ನಲ್ಲಿ ವಿಡಿಯೋಗಳನ್ನು ನೋಡುವಾಗ ಕೇವಲ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆಯೇ ವಿನಃ ಮರುಮಾತನಾಡುವುದಿಲ್ಲ. ಇದರಿಂದ ಅವರಲ್ಲಿ ಮಾತು ಕಲಿಯುವ ಮತ್ತು ಸಂವಹನ ನಡೆಸುವ ಆಸಕ್ತಿ ಕಡಿಮೆಯಾಗುತ್ತದೆ.

ಮನೆಯಲ್ಲಿ ಪೋಷಕರು ಮಕ್ಕಳೊಂದಿಗೆ ಹೆಚ್ಚು ಮಾತನಾಡದಿದ್ದರೆ, ಮಗು ಸದಾ ಒಂಟಿಯಾಗಿರುತ್ತಿದ್ದರೆ ಮಾತು ವಿಳಂಬವಾಗುತ್ತದೆ. ಮಗು ತನ್ನ ಸುತ್ತಮುತ್ತಲಿನವರು ಆಡುವ ಮಾತುಗಳನ್ನು ಕೇಳಿಸಿಕೊಂಡೇ ಹೊಸ ಪದಗಳನ್ನು ಕಲಿಯುತ್ತದೆ.

ಮಗುವಿಗೆ ಕಿವಿ ಸರಿಯಾಗಿ ಕೇಳಿಸದಿದ್ದರೆ, ಅದು ಇತರರು ಆಡುವ ಮಾತುಗಳನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಮಾತುಗಳನ್ನು ಕೇಳಿಸಿಕೊಳ್ಳದ ಹೊರತು ಮಕ್ಕಳು ಮಾತನಾಡಲು ಕಲಿಯುವುದಿಲ್ಲ. ಜನ್ಮಜಾತ ಕಿವಿ ಸಮಸ್ಯೆ ಅಥವಾ ಕಿವಿಯಲ್ಲಿ ಸೋಂಕು ಇದಕ್ಕೆ ಕಾರಣವಿರಬಹುದು.

ಮಗುವಿನ ನಾಲಿಗೆ, ತುಟಿ ಅಥವಾ ದವಡೆಯ ಸ್ನಾಯುಗಳು ದೌರ್ಬಲ್ಯ ಹೊಂದಿದ್ದರೆ ಮಾತು ಬರುವುದು ತಡವಾಗುತ್ತದೆ. ಕೆಲವೊಮ್ಮೆ ‘ಟಂಗ್-ಟೈ’ ಅಂದರೆ ನಾಲಿಗೆಯ ಕೆಳಗಿನ ಚರ್ಮವು ಬಾಯಿಯ ತಳಭಾಗಕ್ಕೆ ಗಟ್ಟಿಯಾಗಿ ಅಂಟಿಕೊಂಡಿರುವುದರಿಂದ ಮಗುವಿಗೆ ನಾಲಿಗೆಯನ್ನು ಸುಲಭವಾಗಿ ಚಲಿಸಿ ಮಾತನಾಡಲು ಸಾಧ್ಯವಾಗುವುದಿಲ್ಲ.

ಮಗುವಿಗೆ ಮಾತು ಬಾರದಿರುವುದರ ಜೊತೆಗೆ, ಅದು ಇತರರ ಕಣ್ಣಿಗೆ ಕಣ್ಣಿಟ್ಟು ನೋಡದಿದ್ದರೆ, ತನ್ನ ಹೆಸರನ್ನು ಕರೆದಾಗ ಓಗೊಡದಿದ್ದರೆ ಅಥವಾ ಒಂಟಿಯಾಗಿರಲು ಇಷ್ಟಪಡುತ್ತಿದ್ದರೆ ಅದು ‘ಆಟಿಸಂ’ ಎಂಬ ನರಸಂಬಂಧಿ ಬೆಳವಣಿಗೆಯ ಕೊರತೆಯ ಲಕ್ಷಣವಾಗಿರಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !