May 23, 2026
Saturday, May 23, 2026
spot_img

LIFE | ಜೀವನದಲ್ಲಿ ಆಯ್ಕೆಗಳು ಹೆಚ್ಚಾದಂತೆ ಕನ್ಫ್ಯೂಷನ್ ಯಾಕೆ ಹೆಚ್ಚಾಗುತ್ತೆ?

ಒಂದು ಕಾಲದಲ್ಲಿ ಆಯ್ಕೆಗಳು ಕಡಿಮೆ ಇದ್ದಾಗ ಜೀವನ ಸರಳವಾಗಿತ್ತು ಅಂತ ಅನಿಸುತ್ತೆ. ಈಗ ನೋಡಿದರೆ ಎಲ್ಲದರಲ್ಲೂ ಹಲವು ಆಪ್ಶನ್. lifestyle, relationship, food, ಕೆರಿಯರ್, even daily decisionsಗೂ ನೂರಾರು ಆಯ್ಕೆಗಳು. ಹೊರಗಿನಿಂದ ನೋಡಿದರೆ ಇದು ಫ್ರೀಡಂ ಅನ್ನಿಸಬಹುದು, ಆದರೆ ಒಳಗೆ ನೋಡಿದರೆ ಇದೇ ಫ್ರೀಡಂ ನಿಧಾನವಾಗಿ ಕನ್ಫ್ಯೂಷನ್ ಆಗಿಬಿಡುತ್ತದೆ.

ಯಾಕೆಂದರೆ ಆಯ್ಕೆಗಳು ಹೆಚ್ಚಾದಂತೆ “ಸರಿಯಾದದ್ದು ಯಾವುದು?” ಅನ್ನೋ ಭಯವೂ ಹೆಚ್ಚುತ್ತದೆ. ಒಂದು ಆಯ್ಕೆ ಮಾಡಿದರೆ ಇನ್ನೊಂದು ಕಳೆದುಕೊಳ್ಳುತ್ತೇವೆ ಅನ್ನೋ ಭಾವನೆ ಮನಸ್ಸಿನಲ್ಲಿ ಇರತ್ತೆ. ಇದರಿಂದ ನಾವು ನಿರ್ಧಾರ ತೆಗೆದುಕೊಳ್ಳೋದನ್ನೇ ತಡ ಮಾಡುತ್ತೇವೆ ಅಥವಾ ಡೌಟ್ ಮಾಡುತ್ತೇವೆ. ಕೊನೆಗೆ ಯಾವ ದಾರಿಯೂ ಕ್ಲಿಯರ್ ಆಗಿ ಕಾಣೋದಿಲ್ಲ.

ಮತ್ತೊಂದು ಕಾರಣ ಅಂದ್ರೆ ನಾವು ಎಲ್ಲ ಆಯ್ಕೆಗಳನ್ನು ಪರ್ಫೆಕ್ಟ್ ಆಗಿರಬೇಕು ಅಂತ ನಿರೀಕ್ಷಿಸುತ್ತೇವೆ. “ಬೆಸ್ಟ್ ಆಪ್ಶನ್” ಹುಡುಕುವ ಪ್ರಯತ್ನದಲ್ಲಿ “good enough” ಅನ್ನೋದು ಕಾಣಿಸೋದಿಲ್ಲ. ಹೀಗಾಗಿ ಸರಳ ನಿರ್ಧಾರಗಳೂ ದೊಡ್ಡ ಗೊಂದಲವಾಗಿಬಿಡುತ್ತವೆ.

ಇದನ್ನೂ ಓದಿ:

ಆಯ್ಕೆಗಳು ಹೆಚ್ಚಾದರೆ ಜೀವನ ಸುಲಭವಾಗಬೇಕು ಅಂತ ನಾವು ಭಾವಿಸುತ್ತೇವೆ. ಆದರೆ ಮನಸ್ಸಿಗೆ ಕ್ಲಾರಿಟಿ ಇಲ್ಲದಿದ್ದರೆ, ಆಯ್ಕೆಗಳ ಹೆಚ್ಚಳವೇ ಒತ್ತಡ ತರುತ್ತದೆ. ಪ್ರತಿಯೊಂದು ಆಪ್ಶನ್ ಕೂಡ ಮತ್ತೊಂದು ಪ್ರಶ್ನೆ ಹುಟ್ಟಿಸುತ್ತದೆ. ನಿಜವಾಗಿ ಕ್ಲಾರಿಟಿ ಬರೋದು ಆಯ್ಕೆಗಳ ಸಂಖ್ಯೆ ಕಡಿಮೆಯಾದಾಗ ಅಲ್ಲ… ನಾವು ಏನು ಬಯಸುತ್ತೇವೆ ಅನ್ನೋದು ಸ್ಪಷ್ಟವಾದಾಗ.

ಯಾಕೆಂದರೆ ಸ್ಪಷ್ಟ ಮನಸ್ಸು ಇದ್ದರೆ ನೂರಾರು ಆಪ್ಶನ್ ಇದ್ದರೂ ದಾರಿ ಒಂದೇ ಆಗಿ ಕಾಣುತ್ತದೆ. ಹೀಗಾಗಿ ಜೀವನದಲ್ಲಿ ಕನ್ಫ್ಯೂಷನ್ ಹೆಚ್ಚಾಗ್ತಿದೆ ಅಂತ ಅನಿಸಿದರೆ, ಕೆಲವೊಮ್ಮೆ ಉತ್ತರ ಆಪ್ಶನ್ ಕಡಿಮೆ ಮಾಡೋದಲ್ಲ… ನಮ್ಮನ್ನು ನಾವು ಅರ್ಥಮಾಡಿಕೊಳ್ಳೋದರಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !