May 24, 2026
Sunday, May 24, 2026
spot_img

10.09 ಸೆಕೆಂಡ್…100 ಮೀಟರ್ ಓಟ: ಹೊಸ ದಾಖಲೆ ಬರೆದ ಗುರಿಂದರ್ವೀರ್ ಸಿಂಗ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಂಚಿಯ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆದ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಕೂಟದಲ್ಲಿ ಪಂಜಾಬ್‌ನ 25 ವರ್ಷದ ಓಟಗಾರ ಗುರಿಂದರ್ವೀರ್ ಸಿಂಗ್ 10.09 ಸೆಕೆಂಡ್​​ಗಳಲ್ಲಿ 100 ಮೀಟರ್ ತನ್ನ ಗುರಿಯನ್ನು ತಲುಪಿದ್ದು, ಈ ಮೂಲಕ ನೂತನ ರಾಷ್ಟ್ರೀಯ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾನೆ.

ಹೊಸ ದಾಖಲೆ ಬರೆದ ಸಿಂಗ್

ಈ ಸ್ಪರ್ಧೆಯ ಓಟದಲ್ಲಿ ಅನಿಮೇಶ್ ಕುಜೂರ್ 10.15 ಸೆಕೆಂಡುಗಳಲ್ಲಿ ಓಡಿ ರಾಷ್ಟ್ರೀಯ ದಾಖಲೆ ಬರೆದಿದ್ದರು. ಇದರ ಬೆನ್ನಲ್ಲೇ ಓಡಿದ ಗುರಿಂದರ್ವೀರ್ ಸಿಂಗ್, 10.10 ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಓಡಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ

ಈ ಮೂಲಕ ಗುರಿಂದರ್ವೀರ್ ಸಿಂಗ್ ಏಷ್ಯಾದ ಎರಡನೇ ವೇಗದ ವ್ಯಕ್ತಿ ಎಂಬ ಹೆಗ್ಗಳಿಕೆ ಜೊತೆಗೆ 2026ರ ಕಾಮನ್‌ವೆಲ್ತ್ ಗೇಮ್ಸ್‌ಗೆ ತಮ್ಮ ಅರ್ಹತೆಯನ್ನು ಸಹ ಖಚಿತಪಡಿಸಿಕೊಂಡಿದ್ದಾರೆ.

ಭಾರತೀಯರ ಡಿಎನ್​ಎ ಬಹಳ ಗಟ್ಟಿ

ಬಳಿಕ ಸುದ್ದಿಗಾರರೊಂದಿಗೆ ಖುಷಿ ಹಂಚಿಕೊಂಡ ಗುರಿಂದರ್‌ವೀರ್ ಸಿಂಗ್, 13 ವರ್ಷದವನಿದ್ದಾಗ 100 ಮೀಟರ್​ ಓಟಕ್ಕಾಗಿ ತಯಾರಿ ನಡೆಸಲು ಮುಂದಾಗಿದ್ದೆ. ಆ ವೇಳೆ 100 ಮೀಟರ್​ನಲ್ಲಿ ನಿನಗೆ ಭವಿಷ್ಯವಿಲ್ಲ, ನೀವು 400 ಮೀಟರ್​ಗೆ ತಯಾರಿ ಮಾಡು ಎಂದು ಅನೇಕರು ಹೇಳುತ್ತಿದ್ದರು. ಆದ್ರೆ ಇದೀಗ ಈ ಸಾಧನೆ ಮಾಡಿ ನನ್ನ ಭಾರತೀಯರ ಡಿಎನ್​ಎ ಬಹಳ ಗಟ್ಟಿ ಎಂದು ಜಗತ್ತಿಗೆ ತೋರಿಸಿದ್ದೆನೆ ಎಂದು ಅವರು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !