ಪಿರಿಯಡ್ಸ್‌ಗೆ ತಕ್ಕಂತೆ ದಿನಗಳು, ಬಟ್ಟೆ, ಟ್ರಾವೆಲಿಂಗ್, ಟ್ರಿಪ್ ಹಾಗೂ ಫಂಕ್ಷನ್‌ಗಳು ಪ್ಲಾನ್ ಆಗುತ್ತವೆ. ಆದರೆ ಕರೆಕ್ಟ್ ಆಗಿ ಪಿರಿಯಡ್ಸ್ ಯಾವತ್ತು ಬರುತ್ತದೆ ಎಂದು ಗೊತ್ತಾಗದೇ ಹೋದ್ರೆ ಏನೂ ಮಾಡೋಕೆ ಆಗೋದಿಲ್ಲ. ಇವತ್ತೇ ನಿಮ್ಮ ಪೀರಿಯಡ್ಸ್ ಬರುತ್ತದೆ ಅಂದ್ರೆ ಈ ಎಲ್ಲ ಲಕ್ಷಣಗಳು ಕಾಣಿಸುತ್ತವೆ..
ನಿಧಾನವಾದ ಅಥವಾ ಜೋರಾದ ಕಿಬ್ಬೊಟ್ಟೆನೋವು ಆರಂಭವಾಗುತ್ತದೆ.
ಬ್ರೌನ್ ಅಥವಾ ಪಿಂಕ್ ಡಿಸ್ಚಾರ್ಜ್ ಬರಲು ಆರಂಭವಾಗುತ್ತದೆ.
ಮಲಬದ್ಧತೆ ಅಥವಾ ಬೇಧಿ ಆಗುತ್ತದೆ, ಕೆಲವರಿಗೆ ಪಿರಿಯಡ್ಸ್ ಆರಂಭಕ್ಕೂ ಮುನ್ನ ಗ್ಯಾಸ್ ಹೆಚ್ಚಾಗಿರುತ್ತದೆ.
ಸ್ತನಗಳಲ್ಲಿ ನೋವಿರೋದು ಮತ್ತೊಂದು ಕಾಮನ್ ಲಕ್ಷಣವಾಗಿದೆ. ಭಾರವಾದಂತೆ, ಊದಿಕೊಂಡಂತೆ, ಮುಟ್ಟೋಕೂ ನೋವಾಗುವಂತಹ ಅನುಭವ.
ಕೆಲ ದಿನಗಳಿಂದ ಊದಿಕೊಂಡಂತೆ ಭಾಸವಾಗಿದ್ದ ಹೊಟ್ಟೆ ಈಗ ನಿರಾಳವಾಗುತ್ತದೆ. ಕೆಲವರಿಗೆ ಮೀನುಖಂಡದಲ್ಲಿಯೂ ನೋವಾಗುತ್ತದೆ.
ಇದ್ದಕ್ಕಿದ್ದಂತೆಯೇ ಮೂಡ್‌ನಲ್ಲಿ ಬದಲಾವಣೆ, ಅಳು, ನಗು, ಸಿಟ್ಟು, ಸಿಹಿ ಅಥವಾ ಖಾರ ತಿನ್ನುವ ಆಸೆ ಆಗುತ್ತದೆ.



