May 25, 2026
Monday, May 25, 2026
spot_img

ಮನಸ್ಸಿಗೆ ತಗೋಬೇಡಿ! ಕಾಕ್ರೋಚ್‌ ಜನತಾ ಪಾರ್ಟಿ ವಿರುದ್ಧದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಕ್ರೋಚ್‌ ಜನತಾ ಪಾರ್ಟಿಗೆ ಸಂಬಂಧಿಸಿದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಅರ್ಜಿಯನ್ನು ವಿಚಾರಣೆಯನ್ನು ನಡೆಸಿದ್ದು, ಈ ವಿಷಯವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದೆ.

ಈ ಅರ್ಜಿಗೆ ಸಂಬಂಧಿಸಿದಂತೆ ಪ್ರಕರಣದಲ್ಲಿ ತುರ್ತು ಎನ್ನುವಂಥದ್ದು ಏನೂ ಇಲ್ಲ, ಈ ಅರ್ಜಿಯ ವಿಚಾರಣೆಯನ್ನು ನಂತರ ನೋಡುತ್ತೇವೆ ಎಂದು ಹೇಳಿದೆ.

ಹಿನ್ನೆಲೆ ಏನು?

ಮೇ.15ರಂದು ಅರ್ಜಿಯೊಂದರ ವಿಚಾರಣೆ ಸಂದರ್ಭ ಸಿಜೆಐ ಸೂರ್ಯಕಾಂತ್‌ ನಿರುದ್ಯೋಗಿಗಳನ್ನು ಜಿರಳೆಗಳಿಗೆ ಹೋಲಿಸಿದ್ದರು. ಇದು ನಿರುದ್ಯೋಗಿಗಳ ಮನಸ್ಸಿಗೆ ನೋವುಂಟು ಮಾಡಿತ್ತು. ಉದ್ಯೋಗ ಸಿಗದ ಯುವಕರು ಜಿರಳೆಗಳಂತೆ ಹೆಚ್ಚಾಗಿದ್ದು, ಸಮಾಜದ ವ್ಯವಸ್ಥೆ ಮೇಲೆ ದಾಳಿ ಮಾಡ್ತಿದ್ದಾರೆ ಎಂದು ಹೇಳಿದ್ದರು. ಇದಾದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟ್‌ಮೆಂಟ್‌ ಬಗ್ಗೆ ಮಾತುಕತೆ ಜೋರಾಯ್ತು. ಆನಂತರ ಸಿಜೆಐ ನಕಲಿ ಪದವೀಧರರ ಬಗ್ಗೆ ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದರು. ಇದೆಲ್ಲದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ ಹುಟ್ಟಿಕೊಂಡಿತ್ತು. ಖಾತೆ ತೆರೆದ ದಿನವೇ ಲಕ್ಷಾಂತರ ಮಂದಿ ಇದನ್ನು ಪಾಲೋ ಮಾಡಿದ್ದರು. ಕೇಂದ್ರ ಗುಪ್ತಚರ ಇಲಾಖೆಯ ಸಲಹೆ ಹಿನ್ನೆಲೆಯಲ್ಲಿ ಈ ಖಾತೆಯನ್ನು ಬ್ಯಾನ್‌ ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !