October 16, 2026
Friday, October 16, 2026
spot_img

ಐ ಲವ್‌ ಇಂಡಿಯಾ, ಐ ಲವ್‌ ಮೋದಿ, ಇಂಡಿಯಾ ಟ್ರಸ್ಟ್‌ ಮಿ ಎಂದ ಡೊನಾಲ್ಡ್ ಟ್ರಂಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾನು ಭಾರತವನ್ನು ಪ್ರೀತಿಸ್ತೀನಿ, ನನಗೆ ಮೋದಿ ಎಂದರೆ ತುಂಬಾ ಇಷ್ಟ. ಭಾರತ ಬಯಸಿದ್ದೆಲ್ಲವೂ ಸಿಗುತ್ತದೆ. ನನ್ನನ್ನು ನೀವು ನೂರಕ್ಕೆ ನೂರರಷ್ಟು ನಂಬಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಭಾರತದಲ್ಲಿರುವ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್‌ ಅವರಿಗೆ ಟ್ರಂಪ್‌ ಕರೆ ಮಾಡಿದ್ದು, ಭಾರತ ಹಾಗೂ ಭಾರತದ ಪ್ರಧಾನಿಗೆ ಈ ವಿಶೇಷ ಸಂದೇಶವನ್ನು ನೀಡಿದ್ದಾರೆ. ಭಾರತವನ್ನು ಕಂಡರೆ ನನಗೆ ವಿಶೇಷ ಪ್ರೀತಿಯಿದೆ. ಮೋದಿಯವರ ಮೇಲೆ ಅತ್ಯಂತ ಗೌರವವಿದೆ. ಭಾರತಕ್ಕೆ ಯಾವಾಗ ಹೇಗೆ ಸಹಾಯ ಬೇಕಾದರೂ ನಾನು ಮಾಡಲು ಸಿದ್ಧ. ಭಾರತಕ್ಕೆ ಸಹಾಯ ಬೇಕಾದರೆ ಎಲ್ಲಿಗೆ ಕರೆ ಮಾಡಬೇಕೆಂಬುದು ಅವರಿಗೆ ಗೊತ್ತಿದೆ ಎಂದು ಹೇಳಿದ್ದಾರೆ.

ನಾವು ಚೆನ್ನಾಗಿ ಕೆಲಸ ಮಾಡುತ್ತಿದ್ದೇವೆ. ನಾವು ದಾಖಲೆಗಳನ್ನು ಸ್ಥಾಪಿಸುತ್ತಿದ್ದೇವೆ. ನಮ್ಮಲ್ಲಿ ದಾಖಲೆಯ ಆರ್ಥಿಕತೆ, ದಾಖಲೆಯ ಷೇರು ಮಾರುಕಟ್ಟೆ ಮತ್ತು ಭಾರತ ಪಡೆಯಲು ಬಯಸುವ ಯಾವುದಾದರೂ ವಿಷಯವಿದೆ. ನಾನು ಪ್ರಧಾನಿ ಮೋದಿ ಅವರ ದೊಡ್ಡ ಅಭಿಮಾನಿ ಎಂದು ಟ್ರಂಪ್ ಹೇಳಿದ್ದಾರೆ.

Must Read