May 25, 2026
Monday, May 25, 2026
spot_img

ದಕ್ಷಿಣ ಕನ್ನಡದಲ್ಲೂ ಆನೆ ಕಾಳಗ: ಸಲಗಗಳ ಸಿಟ್ಟಿಗೆ ಮರಿಯಾನೆ ಬಲಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರುಪಣೆ ಎಂಬಲ್ಲಿ ಅಂದಾಜು ಒಂದು ವರ್ಷದ ಮರಿಯಾನೆ ಸಾವನ್ನಪ್ಪಿದ್ದು, ಗಂಡಾನೆಗಳ ದಾಳಿ ಈ ಘಟನೆಗೆ ಕಾರಣ ಎಂಬ ದಟ್ಟ ಅನುಮಾನ ವ್ಯಕ್ತವಾಗಿದೆ.

ಈ ಘಟನೆಗೆ ಸೋಮವಾರ ಮುಂಜಾನೆ ಸಂಭವಿಸಿದೆ. ಅರಂತೋಡು ಗ್ರಾಮದ ಬೆದ್ರುಪಣೆ ಅಶೋಕ್ ಎಂಬುವವರ ಖಾಸಗಿ ತೋಟದಲ್ಲಿ ಈ ಅವಘಡ ಕಂಡುಬಂದಿದೆ.

ರಾತ್ರಿ ತೋಟಕ್ಕೆ ಆನೆಗಳು ದಾಳಿಯಿಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅವುಗಳನ್ನು ಅರಣ್ಯಕ್ಕೆ ಓಡಿಸುವ ಕೆಲಸ ನಡೆಸಿದ್ದರು. ಆ ಬಳಿಕ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಆನೆಗಳ ನಡುವೆ ಕಿತ್ತಾಟ ಸಂಭವಿಸಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿ ಮಂಜುನಾಥ್ ಎನ್. ಸೇರಿದಂತೆ ಅರಣ್ಯ ಇಲಾಖಾ ಅಧಿಕಾರಿಗಳ ದಂಡು ತೆರಳಿದ್ದು ಇನ್ನು ಮರಣೋತ್ತರ ಪರೀಕ್ಷೆ ಸಹಿತ ಇತರೆ ಪ್ರಕ್ರಿಯೆಗಳನ್ನು ನಡೆಸಲು ಚಿಂತಿಸಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !