September 4, 2026
Friday, September 4, 2026
spot_img

ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿ ಮುಂದೆ ಮಂಡಿಯೂರಿ ಕ್ಷಮೆ ಕೇಳಿದ ರಣವೀರ್‌ ಸಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂತಾರ ಸಿನಿಮಾದ ಚಾವುಂಡಿ ದೈವದ ಪಾತ್ರಕ್ಕೆ ಅವಮಾನ ಮಾಡಿದ್ದ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಕ್ಷಮೆಕೋರಿದ್ದಾರೆ.

ಯಾವ ಮೀಡಿಯಾಗಳ ಜೊತೆ ಬಾರದ ರಣ್‌ವೀರ್‌, ಸದ್ದಿಲ್ಲದಂತೆಯೇ ಸೀದ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಬಂದಿಳಿದಿದ್ದರು. ಚಾಮುಂಡಿ ತಾಯಿಯ ಎದುರಿಗೆ ರಣ್‌ವೀರ್‌ ತಲೆಬಾಗಿ ಕುಳಿತಿರುವ ಫೋಟೊ, ವಿಡಿಯೋಗಳು ವೈರಲ್‌ ಆಗಿದೆ.

ಕೆಲ ಸಮಯದ ಹಿಂದೆ ರಣವೀರ್‌ ಸಿಂಗ್‌ ಅವಾರ್ಡ್‌ ಕಾರ್ಯಕ್ರಮವೊಂದರಲ್ಲಿ ಕಾಂತಾರ ಸಿನಿಮಾದ ಚಾವುಂಡಿ ತಾಯಿಯ ಅಭಿನಯವನ್ನು ತಮಾಷೆ ಮಾಡಿದ್ದರು. ಇದು ದೈವ ಭಕ್ತರಿಗೆ ಅಸಮಾಧಾನ ಉಂಟು ಮಾಡಿತ್ತು.

ನಂತರ ರಣ್‌ವೀರ್‌ ಸಿಂಗ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ವೇಳೆ ಚಾಮುಂಡಿ ತಾಯಿ ಬಳಿ ಹೋಗಿ ಕ್ಷಮೆ ಕೇಳುತ್ತೇನೆ ಎಂದಿದ್ದರು. ಅಂತೆಯೇ ಚಾಮುಂಡಿ ದೇವಿಗೆ ಕ್ಷಮೆ ಕೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !