October 17, 2026
Saturday, October 17, 2026
spot_img

ಕಾಲೇಜ್ ಸ್ಟೂಡೆಂಟ್ ಸ್ಟೈಲ್‌ನಲ್ಲಿ ಎಂಟ್ರಿ.. ಲಕ್ಷಾಂತರ ರೂ ಮೌಲ್ಯದ ಲ್ಯಾಪ್‌ಟಾಪ್ ಕದ್ದ ಗ್ಯಾಂಗ್‌ಗೆ ಪೊಲೀಸರ ಲಾಕ್!

ಹೊಸದಿಗಂತ ವರದಿ ಹುಬ್ಬಳ್ಳಿ:

ವಿದ್ಯಾರ್ಥಿನಿಲಯಗಳು ಹಾಗೂ ಕಾಲೇಜುಗಳನ್ನು ಟಾರ್ಗೆಟ್ ಮಾಡಿಕೊಂಡು ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ವಿದ್ಯಾನಗರ ಪೊಲೀಸರು ಆಂಧ್ರ ಪ್ರದೇಶದಲ್ಲಿ ಬಂಧಿಸಿದ್ದಾರೆ. ಆರೋಪಿಗಳಿಂದ ₹5.40 ಲಕ್ಷ ಮೌಲ್ಯದ 6 ಲ್ಯಾಪ್‌ಟಾಪ್‌ಗಳು ಮತ್ತು 12 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಆಂಧ್ರದ ಕಳ್ಳರ ಬಂಧನ

ಆಂಧ್ರ ಪ್ರದೇಶದ ವೆಂಕಟಗಿರಿ ಕೋಟಾ ಜಿಲ್ಲೆಯ ಚೌಡೇಪಲ್ಲಿ ನಿವಾಸಿಗಳಾದ ಸತ್ಯಮೇಲು ಹಾಗೂ ಸರವಣ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಕಾಲೇಜು ವಿದ್ಯಾರ್ಥಿಗಳಂತೆ ನಟನೆ

ಆರೋಪಿಗಳು ಕಾಲೇಜು ವಿದ್ಯಾರ್ಥಿಗಳಂತೆ ವೇಷಧರಿಸಿ ಪಿಜಿ ಹಾಗೂ ಕಾಲೇಜುಗಳಿಗೆ ಪ್ರವೇಶಿಸಿ 9ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ಗಳು ಮತ್ತು 12 ಮೊಬೈಲ್‌ಗಳನ್ನು ಕಳವು ಮಾಡಿ ಪರಾರಿಯಾಗಿದ್ದರು.

ಇದನ್ನೂ ಓದಿ:

ಪೊಲೀಸರ ಬಲೆ ಬಿಸಿ ಕಾರ್ಯಾಚರಣೆ

ಪ್ರಕರಣ ದಾಖಲಿಸಿಕೊಂಡ ವಿದ್ಯಾನಗರ ಪೊಲೀಸರು ಆರೋಪಿಗಳ ಚಲನವಲನದ ಮೇಲೆ ನಿಗಾ ಇಟ್ಟು ಆಂಧ್ರ ಪ್ರದೇಶದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಪೊಲೀಸ್ ಅಧಿಕಾರಿ ಜಾಕ್ಸನ್ ಡಿಸೋಜಾ ಮಾರ್ಗದರ್ಶನದಲ್ಲಿ ಪಿಎಸ್‌ಐ ಪುನೀತ್ ಕುಮಾರ್, ಸುನೀಲ್ ಎಂ. ಹಾಗೂ ಕ್ರೈಂ ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.

Must Read