September 23, 2026
Wednesday, September 23, 2026
spot_img

Dessert | ಸೂಪರ್ ಕೂಲ್ ಡೆಸರ್ಟ್ ಬೇಕಾ?: ಮ್ಯಾಂಗೋ ಸಾಗೋ ಉಂಟಲ್ಲ, ಒಮ್ಮೆ ಟ್ರೈ ಮಾಡಿ

ಸಿಹಿಯಾದ ಫ್ರೂಟಿ ಡೆಸರ್ಟ್ ತಿನ್ನಬೇಕು ಅಂದಾಗ ಮೊದಲಿಗೆ ನೆನಪಿಗೆ ಬರುವ ರೆಸಿಪಿಗಳಲ್ಲಿ ಮ್ಯಾಂಗೋ ಸಾಗೋ ಕೂಡ ಒಂದು. ಮಾವಿನಹಣ್ಣಿನ ಸಿಹಿ ರುಚಿ, ತೆಂಗಿನ ಹಾಲಿನ ಕ್ರೀಮಿ ಫ್ಲೇವರ್ ಮತ್ತು ಸಬ್ಬಕ್ಕಿಯ ಸಾಫ್ಟ್ ಟೆಕ್ಸ್ಚರ್ ಸೇರಿ ಈ ಡೆಸರ್ಟ್‌ಗೆ ವಿಶೇಷ ಟೇಸ್ಟ್ ಕೊಡುತ್ತದೆ. ನೀವೂ ಒಮ್ಮೆ ಟ್ರೈ ಮಾಡಿ

ಬೇಕಾಗುವ ಸಾಮಗ್ರಿಗಳು

ಸಬ್ಬಕ್ಕಿ – ಅರ್ಧ ಕಪ್
ಮಾವಿನಹಣ್ಣಿನ ಪ್ಯೂರೆ – 1½ ಕಪ್
ಮಾವಿನಹಣ್ಣಿನ ತುಂಡುಗಳು – 1 ಕಪ್
ತೆಂಗಿನ ಹಾಲು – 1 ಕಪ್
ಕಂಡೆನ್ಸ್ಡ್ ಮಿಲ್ಕ್ – ಕಾಲು ಕಪ್
ನೀರು – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ಸಬ್ಬಕ್ಕಿ ಹಾಕಿ. ಸಬ್ಬಕ್ಕಿ ಪಾರದರ್ಶಕವಾಗುವವರೆಗೆ ಬೇಯಿಸಿ ನಂತರ ಸೋಸಿ ತಣ್ಣೀರಿನಲ್ಲಿ ತೊಳೆಯಿರಿ.

ಈಗ ಒಂದು ದೊಡ್ಡ ಬಟ್ಟಲಿನಲ್ಲಿ ಮಾವಿನ ಪ್ಯೂರೆ, ತೆಂಗಿನ ಹಾಲು ಮತ್ತು ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಬೇಯಿಸಿದ ಸಬ್ಬಕ್ಕಿಯನ್ನು ಇದಕ್ಕೆ ಸೇರಿಸಿ ನಿಧಾನವಾಗಿ ಕಲಸಿ.

ಸಿದ್ಧವಾದ ಮಿಶ್ರಣವನ್ನು ಫ್ರಿಡ್ಜ್‌ನಲ್ಲಿ ಕೆಲ ಸಮಯ ತಣ್ಣಗಾಗಲು ಇಡಿ. ಸರ್ವ್ ಮಾಡುವ ಮೊದಲು ಮೇಲಿಂದ ಮಾವಿನಹಣ್ಣಿನ ತುಂಡುಗಳನ್ನು ಹಾಕಿ ಚಿಲ್ಲ್ಡ್ ಆಗಿ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !