ಪಪ್ಪಾಯಿ ಶೇಕ್ ಒಂದು ಸರಳ, ಪೌಷ್ಟಿಕ ಮತ್ತು ದೇಹಕ್ಕೆ ತುಂಬಾ ಹಿತಕರವಾದ ಪಾನೀಯ. ಇದನ್ನು ಕೆಲವೇ ನಿಮಿಷಗಳಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ನಿಮ್ಮ ಮನೆಯಲ್ಲಿ ಪಪ್ಪಾಯಿ ಹಣ್ಣು ಸಿಕ್ರೆ ಹಾಗೆ ತಿನ್ಬೇಡಿ ಈ ಶೇಕ್ ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
ಪಪ್ಪಾಯಿ ತುಂಡುಗಳು – 1 ಕಪ್
ಹಾಲು – 1 ಕಪ್
ಜೇನುತುಪ್ಪ ಅಥವಾ ಸಕ್ಕರೆ – 1–2 ಚಮಚ
ಏಲಕ್ಕಿ ಪುಡಿ – ಚಿಟಿಕೆ
ಐಸ್ ಕ್ಯೂಬ್‌ಗಳು – 3 ರಿಂದ 4
ಮಾಡುವ ವಿಧಾನ:
ಮಿಕ್ಸಿ ಜಾರಿಗೆ ಪಪ್ಪಾಯಿ ತುಂಡುಗಳನ್ನು ಹಾಕಿ. ಅದಕ್ಕೆ ಹಾಲು, ಜೇನುತುಪ್ಪ (ಅಥವಾ ಸಕ್ಕರೆ) ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ನುಣ್ಣಗೆ ಆಗುವವರೆಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ನಂತರ ಐಸ್ ಕ್ಯೂಬ್‌ಗಳನ್ನು ಸೇರಿಸಿ ಮತ್ತೊಮ್ಮೆ ಕೆಲವು ಸೆಕೆಂಡು ಮಿಕ್ಸ್ ಮಾಡಿ. ಈಗ ರುಚಿಕರವಾದ ಪಪ್ಪಾಯಿ ಶೇಕ್ ಸಿದ್ಧವಾಗಿದೆ. ತಕ್ಷಣವೇ ಗ್ಲಾಸ್‌ಗೆ ಸುರಿದು ಸವಿಯಿರಿ.



