ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಮುಖ್ಯಮಂತ್ರಿ ಆಗಿರುವ ನಟ ವಿಜಯ್ ಅವರನ್ನು ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಭೇಟಿಯಾಗಿರುವುದು ಸಿನಿ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಈ ಭೇಟಿಯ ಫೋಟೋವನ್ನು ಲೋಕೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳು ‘ಲಿಯೋ 2’ ಸಿನಿಮಾ ಬಗ್ಗೆ ಊಹಾಪೋಹ ಆರಂಭಿಸಿದ್ದಾರೆ.
ವೈರಲ್ ಆಯ್ತು ಫೋಟೋ
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಜಯ್ ಜೊತೆಗಿನ ಚಿತ್ರ ಹಂಚಿಕೊಂಡ ಲೋಕೇಶ್, “ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು ಅಣ್ಣಾ” ಎಂದು ಬರೆದುಕೊಂಡಿದ್ದಾರೆ. ಇಬ್ಬರೂ ನಗುಮುಖದಲ್ಲಿ ಕಾಣಿಸಿಕೊಂಡ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ.
‘ಲಿಯೋ 2’ ನಿರೀಕ್ಷೆ ಹೆಚ್ಚಿಸಿದ ಫ್ಯಾನ್ಸ್
ಈ ಫೋಟೋ ನೋಡಿ ಅನೇಕರು ‘ಲಿಯೋ 2’ ಅಥವಾ ‘ಮಾಸ್ಟರ್ 2’ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಕೆಲವರು “ವಿಜಯ್ ರಾಜಕೀಯಕ್ಕೆ ಹೋಗುವ ಮೊದಲು ಮತ್ತೊಂದು ಸಿನಿಮಾ ಮಾಡಬೇಕಿತ್ತು” ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಈ ಜೋಡಿಯ ಮತ್ತೊಂದು ಸಿನಿಮಾ ನೋಡಲು ಆಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಸಿನಿಮಾ ಬಿಟ್ಟು ರಾಜಕೀಯದತ್ತ ವಿಜಯ್
ವಿಜಯ್ ಈಗ ಸಂಪೂರ್ಣ ರಾಜಕೀಯದತ್ತ ಗಮನ ಹರಿಸಿದ್ದು, ಚಿತ್ರರಂಗದಿಂದ ನಿವೃತ್ತಿ ಘೋಷಿಸಿದ್ದಾರೆ. ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಲೋಕೇಶ್ ಜೊತೆಗಿನ ಭೇಟಿ ಹೊಸ ಕುತೂಹಲ ಹುಟ್ಟಿಸಿದೆ.



