August 21, 2026
Friday, August 21, 2026
spot_img

ವಿಂಡ್ ಟನಲ್ ರಸ್ತೆ ಅಂಡರ್‌ಪಾಸ್ ವೇಗಕ್ಕೆ ಜಿಬಿಎ ಡೆಡ್‌ಲೈನ್: ಮಹೇಶ್ವರ್ ರಾವ್ ಖಡಕ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು ವಿಂಡ್ ಟನಲ್ ರಸ್ತೆ ಅಂಡರ್‌ಪಾಸ್ ಕಾಮಗಾರಿಯನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಹೆಚ್ಚಿನ ಮಾನವಶಕ್ತಿ ಮತ್ತು ಯಂತ್ರೋಪಕರಣಗಳನ್ನು ಬಳಸಿಕೊಂಡು ಕೆಲಸ ವೇಗವಾಗಿ ಮುಗಿಸಲು ಸೂಚಿಸಲಾಗಿದೆ.

10 ದಿನಗಳಲ್ಲಿ ಯುಟಿಲಿಟಿ ಶಿಫ್ಟ್ ಪೂರ್ಣಗೊಳಿಸಲು ಆದೇಶ

BWSSB ಪೈಪ್‌ಲೈನ್, ಒಳಚರಂಡಿ, ವಿದ್ಯುತ್ ತಂತಿ ಮತ್ತು OFC ಕೇಬಲ್‌ಗಳನ್ನು 10 ದಿನಗಳಲ್ಲಿ ಸ್ಥಳಾಂತರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಂತರ ರಿಟೇನಿಂಗ್ ವಾಲ್ ನಿರ್ಮಾಣ ಆರಂಭಿಸಲು ಆದೇಶಿಸಲಾಗಿದೆ.

ಇದನ್ನೂ ಓದಿ:

ಸಂಚಾರಕ್ಕೆ ತೊಂದರೆಯಾಗದಂತೆ ತಾತ್ಕಾಲಿಕ ರಸ್ತೆ ವ್ಯವಸ್ಥೆ

ಇಸ್ರೋ, ನ್ಯಾಷನಲ್ ಏರೋಸ್ಪೇಸ್ ಲ್ಯಾಬ್ (NAL) ಹಾಗೂ ರಕ್ಷಣಾ ಇಲಾಖೆಯ ಜಾಗಗಳ ಮೂಲಕ ತಾತ್ಕಾಲಿಕ ರಸ್ತೆ ನಿರ್ಮಿಸಲು ಸೂಚಿಸಲಾಗಿದೆ. ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಆಗದಂತೆ ಕಾಮಗಾರಿ ನಡೆಸಬೇಕು ಎಂದು ತಿಳಿಸಲಾಗಿದೆ.

70% ಕಾಮಗಾರಿ ಮುಗಿದ ಯೋಜನೆಗೆ ಫಿನಿಶಿಂಗ್ ಟಚ್

₹19 ಕೋಟಿ ವೆಚ್ಚದ 300 ಮೀಟರ್ ಉದ್ದದ ಆರು ಪಥಗಳ ಅಂಡರ್‌ಪಾಸ್‌ನಲ್ಲಿ ಈಗಾಗಲೇ 70% ಕೆಲಸ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಶೀಘ್ರದಲ್ಲೇ ಮುಗಿಸಿ ಸರ್ವಿಸ್ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !